Sunday, June 7, 2026
Homeಕರಾವಳಿಮಂಗಳೂರು; ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 2 ಲಕ್ಷ ರೂ. ಪಡೆದು ವಂಚನೆ

ಮಂಗಳೂರು; ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 2 ಲಕ್ಷ ರೂ. ಪಡೆದು ವಂಚನೆ

- Advertisement -
- Advertisement -

ಮಂಗಳೂರು; ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 2 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಅವಿನಾಶ್ ಶೆಟ್ಟಿ ಎಂಬಾತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಮೆಕ್ಯಾನಿಕ್ ವಿಭಾಗದಲ್ಲಿ ಪದವಿ ಹೊಂದಿದ್ದ ತನ್ನ ಮಗನಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಅವಿನಾಶ್ ಶೆಟ್ಟಿ ಎಂಬಾತನ ಬಳಿ 2022ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಬಳಿ ಮಾತನಾಡಿದ್ದು, ಆತ ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ. ಅದನ್ನು ನಂಬಿದ ದೂರುದಾರರು 2022ರ ನ.30ರಂದು 1 ಲಕ್ಷ ರೂ., ಡಿ.2ರಂದು 75 ಸಾವಿರ ರೂ., ಡಿ.8ರಂದು 25 ಸಾವಿರ ರೂ.ವನ್ನು ಆರೋಪಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಬಳಿಕ ದೂರುದಾರರ ಮಗನಿಗೆ ಕೆಲಸ ಕೊಡಿಸದೆ, ವಂಚನೆ ಮಾಡಿದ್ದ ಎಂದು ದೂರಲಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



- Advertisement -

Latest News

error: Content is protected !!