Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ ಎಂದು ಅಪರಿಚಿತರಿಂದ ಬಂದ ಕರೆಯನ್ನು ನಂಬಿ  3 ಲಕ್ಷ...

ಮಂಗಳೂರು: ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ ಎಂದು ಅಪರಿಚಿತರಿಂದ ಬಂದ ಕರೆಯನ್ನು ನಂಬಿ  3 ಲಕ್ಷ ಕಳೆದುಕೊಂಡ ವೃದ್ಧ

- Advertisement -
- Advertisement -

ಮಂಗಳೂರು: ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ ಎಂದು ಅಪರಿಚಿತರಿಂದ ಬಂದ ಕರೆಯನ್ನು ನಂಬಿ ವೃದ್ಧರೊಬ್ಬರು 3 ಲಕ್ಷ ಕಳೆದುಕೊಂಡ ಘಟನೆ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೂರುದಾರ ವೃದ್ಧರೊಬ್ಬರ ಮೊಬೈಲ್‌ ಗೆ ಅಪರಿಚಿತರ ಮೊಬೈಲ್ ನಂಬ್ರ-9582276944 ನಿಂದ ಕರೆ ಬಂದಿದ್ದು, ಈ ವೇಳೆ ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ ಎಂದು ಹೇಳಿ ಒಂದು ಎಪಿಕೆ ಫೈಲ್ ಇನ್ಸ್ಟಾಲ್ ಮಾಡಲು ಹೇಳಿದ್ದಾರೆ. ಬಳಿಕ ಸೈಬರ್ ವಂಚಕರು ಬೊನಸ್ ಡೆಪಾಸಿಟ್ ಮಾಡಲು ಕಾರ್ಡ ನಂಬ್ರ ತಿಳಿಸಲು ಹೇಳಿದ್ದಾರೆ. ಅದರಂತೆ ವ್ಯಕ್ತಿ ಕಾರ್ಡ್ ನಂಬರ್ ತಿಳಿಸಿದ್ದಾರೆ. ಬಳಿಕ ಅಪರಿಚಿತರು ಮತ್ತೊಂದು ಮೊಬೈಲ್ ನಂಬ್ರ-8937098978 ನಿಂದ ಕರೆ ಮಾಡಿ ಒ ಟಿ ಪಿ ತಿಳಿಸಿದರೇ ಮಾತ್ರ ಬೊನಸ್ ಜಮಾ ಆಗುವುದು ಎಂದು ಹೇಳಿದ್ದಾರೆ.

ಈ ವೇಳೆ ವ್ಯಕ್ತಿ ಹಲವು ಬಾರಿ ಅವರ ಮೊಬೈಲ್ ಗೆ ಬರುವ ಒ ಟಿ ಪಿ ಗಳನ್ನು ತಿಳಿಸಿರುತ್ತಾರೆ. ದಿನಾಂಕ:16-01-2026 ರಂದು ಅವರ ಐ ಸಿ ಐ ಸಿ ಐ ಬ್ಯಾಂಕ್ ಕ್ರೆಡಿಟ್ ಕಾರ್ಡ ನಿಂದ ರೂ.19,551.54 ರಂತೆ ಒಟ್ಟು 2 ಬಾರಿ ಹಣ ಕಡಿತವಾಗಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಿಂದ ದಿನಾಂಕ:16-01-2026 ರಿಂದ 20-01-2026 ರವರೆಗೆ ಒಟ್ಟು ರೂ.293144.10 ಹಣ ಕಡಿತವಾಗಿರುತ್ತದೆ.

ಈ ನಡುವೆ ಹಣ ಕಳೆದುಕೊಂಡ ವ್ಯಕ್ತಿಯ ಮಗನಿಗೆ ಅವರ ತಾಯಿ ನಿಮ್ಮ ತಂದೆ ಯಾರಿಗೋ ಓಟಿಪಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಮಗ ಬಂದು ವಿಚಾರಿಸಿದಾಗ ಅವರ ಐ ಸಿ ಐ ಸಿ ಐ ಬ್ಯಾಂಕ್ ಕ್ರೆಡಿಟ್ ಕಾರ್ಡ ನಿಂದ 39,103.08 ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಿಂದ ರೂ.293144.10 ರಂತೆ ಹಣ ಕಡಿತವಾದ ಬಗ್ಗೆ ತಿಳಿದು ಬಂದಿದೆ. ಒಟ್ಟು ಮೊತ್ತ ರೂ 3,32,247.18/-ಹಣ ಸೈಬರ್ ವಂಚಕರು ವಂಚಿಸಿದ್ದಾರೆ.

- Advertisement -

Latest News

error: Content is protected !!