- Advertisement -
![]()
- Advertisement -
ಉಡುಪಿ: ಕತ್ತರಿಸಿದ ಬಂಗುಡೆ ಮೀನು ಅಲುಗಾಡಿದ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮಲ್ಪೆ ಬಂದರಿನಲ್ಲಿ ಗ್ರಾಹಕರೋರ್ವರು ಮೀನು ಮಾರಾಟ ಮಾಡುವ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದರು. ನಂತರ ಖರೀದಿಸಿದ ಮೀನನ್ನು ಸ್ಥಳದಲ್ಲೇ ಕತ್ತರಿಸಿ ಕೊಡುವಂತೆ ಗ್ರಾಹಕರು ಕೇಳಿದ್ದ ಕಾರಣ ಮೀನು ವ್ಯಾಪಾರಿ ಮಹಿಳೆ ಮೀನನ್ನು ಕತ್ತರಿಸಿ ಪಾತ್ರೆಗೆ ಹಾಕಿದ್ದರು.
ಪಾತ್ರೆಯೊಳಗೆ ಹಾಕಿದ್ದ ಕತ್ತರಿಸಿಲ್ಪಟ್ಟಿದ್ದ ಮೀನುಗಳ ಪೈಕಿ ಒಂದು ಮೀನಿನ ತುಂಡು ಅಲುಗಾಡಿದ ದೃಶ್ಯ ಕಂಡು ಬಂದಿದೆ. ಮೀನು ಅಲುಗಾಡುತ್ತಿದ್ದನ್ನು ನೋಡಿ ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಇತರರು ಅಚ್ಚರಿಗೊಳಗಾಗಿದ್ದಾರೆ.ಕತ್ತರಿಸಿದ ಬಳಿಕ ಪಾತ್ರೆಯೊಳಗೆ ಮೀನು ಅಲುಗಾಡಿದೆ ಎಂದು ಹೇಳಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
- Advertisement -


