Monday, June 8, 2026
Homeಕರಾವಳಿಬೆಳ್ತಂಗಡಿ: ಗರಿಷ್ಠ ಅಂಕ ಪಡೆದ ಗ್ರಾಮ ಸಹಾಯಕ ಪುತ್ರಿಗೆ ಅಭಿನಂದನೆ ಸಲ್ಲಿಸಿದ ದ.ಕ.ಜಿಲ್ಲಾಧಿಕಾರಿ!

ಬೆಳ್ತಂಗಡಿ: ಗರಿಷ್ಠ ಅಂಕ ಪಡೆದ ಗ್ರಾಮ ಸಹಾಯಕ ಪುತ್ರಿಗೆ ಅಭಿನಂದನೆ ಸಲ್ಲಿಸಿದ ದ.ಕ.ಜಿಲ್ಲಾಧಿಕಾರಿ!

- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯಲ್ಲಿ ಬೆಳ್ತಂಗಡಿ ಗ್ರಾಮ ಸಹಾಯಕರಾಗಿರುವ ಮೂಲತಃ ಬೆಳ್ತಂಗಡಿ ಮೆಸ್ಕಾಂ ಬಳಿ ನಿವಾಸಿ ಸತೀಶ್‌ ಮತ್ತು ಶ್ರೀಮತಿ ಮಂಜುಳಾ ದಂಪತಿಯ ಪುತ್ರಿ ಕುಮಾರಿ ಅನಘ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 621 ಅಂಕ ಪಡೆದಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇದ್ದ ಇಲಾಖೆಯ ವಾಟ್ಸಾಪ್ ಗ್ರೂಪ್ ನಲ್ಲಿ ಸಿಬ್ಬಂದಿಗಳು ಶುಭಾಶಯಗಳನ್ನು ಸಲ್ಲಿಸಿದ್ದರು.

ಇದನ್ನು ಗಮನಿಸಿದ ದ.ಕ. ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರವರು, ಬೆಳ್ತಂಗಡಿ ತಹಶಿಲ್ದಾರ್ ಜೆ.ಮಹೇಶ್ ಅವರಿಗೆ ಕರೆ ಮಾಡಿ ಇಂದು ಬೆಳಗ್ಗೆ ತನ್ನ ಕಛೇರಿಗೆ ಬಾಲಕಿ ಮತ್ತು ಪೋಷಕರನ್ನು ಕಳುಹಿಸಲು ಸೂಚಿಸಿದ್ದರು. ಅದರಂತೆ ಅವರು ಮಂಗಳೂರು ಡಿ.ಸಿ ಕಛೇರಿಗೆ ತೆರಳಿದ್ದು ಅನಘಳನ್ನು ಗೌರವಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಸತೀಶ್ ಅವರ ಪುತ್ರಿ ಕೆ.ಎಸ್.ಅನಘ ಬೆಳ್ತಂಗಡಿಯ ಎಸ್.ಡಿ.ಎಮ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಳು.

- Advertisement -

Latest News

error: Content is protected !!