Sunday, May 26, 2024
Homeತಾಜಾ ಸುದ್ದಿಪೊಲೀಸ್​ ಕಾನ್​ಸ್ಟೇಬಲ್ ಜೊತೆ ಮೂರನೇ ಸಲ ಪತ್ನಿ ಪರಾರಿ, ರೋಸಿ ಹೋದ ಪತಿರಾಯ

ಪೊಲೀಸ್​ ಕಾನ್​ಸ್ಟೇಬಲ್ ಜೊತೆ ಮೂರನೇ ಸಲ ಪತ್ನಿ ಪರಾರಿ, ರೋಸಿ ಹೋದ ಪತಿರಾಯ

spot_img
- Advertisement -
- Advertisement -

ಸಾಂದರ್ಭಿಕ ಚಿತ್ರ

ಮಂಡ್ಯ: ನಿಮ್ಮದೇ ಇಲಾಖೆಯ ಕಾನ್​ಸ್ಟೇಬಲ್ ಜೊತೆ ನನ್ನ ಪತ್ನಿ ಮೂರನೇ ಸಲ ಪರಾರಿಯಾಗಿದ್ದು, ಆತನಿಂದಾಗಿ ನನ್ನ ಸಂಸಾರ ಬೀದಿಗೆ ಬಂದಿದೆ. ದಯಮಾಡಿ ನನಗೆ ನ್ಯಾಯ ಕೊಡಿಸಿ ಎಂದು ನೊಂದ ಪತಿರಾಯ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾನೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ‌ ಮುಳ್ಳೂರು ನಿವಾಸಿಯಾಗಿರುವ ಪತಿ ನಾಗರಾಜಪ್ಪ, ಪತ್ನಿ ಶಿಲ್ಪಾ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೊಳ್ಳೇಗಾಲ ಪಟ್ಟಣದಲ್ಲಿ ವಾಸವಾಗಿದ್ದ.

ಈತನ ಪತ್ನಿ ಶಿಲ್ಪಾಯೊಂದಿಗೆ ಕೊಳ್ಳೇಗಾಲ ಮೂಲದ ಪ್ರಸ್ತುತ ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಕ್ರಮ ಸಂಬಂಧ ಬೆಳೆಸಿದ್ದ. ಇಬ್ಬರು ಹಿಂದೆ ಎರಡು ಸಲ ಮನೆ ಬಿಟ್ಟು ಹೋಗಿದ್ದು ಅವರನ್ನು ಕರೆಸಿ ರಾಜಿ ಪಂಚಾಯಿತಿ ಮಾಡಿ ಮಹಿಳೆಯನ್ನು ಗಂಡನೊಂದಿಗೆ ಕಳುಹಿಸಲಾಗಿತ್ತು. ಈಗ ಮೂರನೇ ಸಲ ಪೊಲೀಸ್ ಪತ್ನಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ

ಈ ಸಂಬಂಧವಾಗಿ ನಾಗರಾಜಪ್ಪ ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪತ್ನಿ ಕರೆದೊಯ್ದ ಪೇದೆ ವಿರುದ್ದ ದೂರು ನೀಡಿದ್ದರೆ ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲವಂತೆ. ಪೇದೆ ಜೊತೆ ಹೋಗಿರೋ ಆಕೆಯೇ ಬಂದು ದೂರು ನೀಡಲಿ, ಹೋಗು ಎಂದು ದಬಾಯಿಸಿ ಕಳಿಸಿದ್ದರಂತೆ. ಇದರಿಂದ ಕಂಗಾಲಾಗಿರುವ ನಾಗರಾಜಪ್ಪ ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಪತ್ನಿಯೊಂದಿಗೆ ಸಂಬಂಧ ಇರುವ ವಿಡಿಯೋ ಮತ್ತು ಆಡಿಯೋ ಇಟ್ಟುಕೊಂಡಿರುವ ಪೊಲೀಸ್ ಆಕೆಯನ್ನು ಬೆದರಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ನನ್ನನ್ನು, ಮಕ್ಕಳನ್ನು ಪತ್ನಿಯಿಂದ ದೂರ ಮಾಡಿದ್ದು ಪತ್ನಿಯನ್ನು ಹುಡುಕಿಕೊಡಬೇಕು. ಪೊಲೀಸ್ ನಿಂದ ಪತ್ನಿಯನ್ನು ದೂರ ಮಾಡಿ ನನಗೆ ನ್ಯಾಯ ದೊರಕಿಸಿಕೊಡಿ ಎಂದು ನೊಂದ ವ್ಯಕ್ತಿ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!