Thursday, June 4, 2026
Homeತಾಜಾ ಸುದ್ದಿನನಗೆ ವಧು ಹುಡುಕಿಕೊಡಿ ಶಿವಮೊಗ್ಗ ಎಸ್ಪಿಗೆ ಪತ್ರ ಬರೆದ ಯುವಕ

ನನಗೆ ವಧು ಹುಡುಕಿಕೊಡಿ ಶಿವಮೊಗ್ಗ ಎಸ್ಪಿಗೆ ಪತ್ರ ಬರೆದ ಯುವಕ

- Advertisement -
- Advertisement -

ಶಿವಮೊಗ್ಗ; ನನಗೆ ವಧು ಹುಡುಕಿಕೊಡಿ ಯುವಕನೊಬ್ಬ ಶಿವಮೊಗ್ಗ ಎಸ್ಪಿಗೆ ಪತ್ರ ಬರೆದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿ ಮೂಲದ ಪ್ರವೀಣ ಓ.ಎಸ್. ಎಂಬಾತ ವಧು ಹುಡುಕಿ ಕೊಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾನೆ.

ಯುವಕನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪತ್ರದಲ್ಲಿ ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಗೊಲ್ಲ ಸಮುದಾಯಕ್ಕೆ ಸೇರಿದ್ದು, ನನ್ನ ತಂದೆ ಇತ್ತೀಚೆಗೆ ನಿಧನರಾಗಿದ್ದಾರೆ. ಅಣ್ಣ ಕೂಡ ಮದ್ವೆಯಾಗಿದ್ದಾನೆ. ನಾನು ಈ ಹಿಂದೆ ಸಾಫ್ಟ್ ವೇರ್‌ ಕಂಪನಿಯಲ್ಲಿ ಕೆಲಸ ಮಾಡಿತ್ತಿದ್ದೆ.ಇದೀಗ ಭದ್ರಾವತಿಯಲ್ಲಿರುವ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ.ವಧು ಅನ್ವೇಷಣೆಯಲ್ಲಿ ಯಾವುದೂ ಸರಿ ಹೋಗದ ಕಾರಣ ನಮ್ಮ ಜಾತಿಯ ವಧು ತಮ್ಮ ಅಧೀನದಲ್ಲಿ ಯಾರಾದರೂ ಕಂಡು ಬಂದಲ್ಲಿ ನನಗೆ ತಿಳಿಸಿ ವಿವಾಹಕ್ಕೆ ಸಹಾಯ ಮಾಡಬೇಕು ಎಂದು ಪತ್ರದಲ್ಲಿ ಯುವಕ ವಿನಂತಿಸಿದ್ದಾನೆ.

ಇದರ ಜೊತೆಗೆ ಪರಿಚಿತರಾದ ಪುರಸಭೆ ಸದಸ್ಯ ಮತ್ತು ಗ್ರಾಮ ಪಂಚಾಯತ್ ಸದಸ್ಯನ ಹೆಸರನ್ನೂ ಪತ್ರದಲ್ಲಿ ಆತ ಉಲ್ಲೇಖಿಸಿದ್ದಾನೆ.ನನ್ನ ಬಗ್ಗೆ ಬೇಕಿದ್ದರೆ ಅವರಲ್ಲಿ ವಿಚಾರಿಸಿ ಎಂದು ಹೇಳಿದ್ದಾನೆ. ಜೊತೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ ಬುಕ್ ಜೆರಾಕ್ಸ್‌ ಪ್ರತಿಗಳನ್ನೂ ಅರ್ಜಿ ಜೊತೆ ಲಗತ್ತಿಸಿದ್ದಾನೆ.

- Advertisement -

Latest News

error: Content is protected !!