Wednesday, July 15, 2026
Homeತಾಜಾ ಸುದ್ದಿಬೈಕ್‌ನ ಟ್ಯಾಂಕ್ ಮೇಲೆ‌ ಪ್ರೇಯಸಿಯನ್ನು ಕೂರಿಸಿಕೊಂಡು‌ ಜಾಲಿ‌ ರೈಡ್ ಮಾಡಿದಾತ ಅಂದ

ಬೈಕ್‌ನ ಟ್ಯಾಂಕ್ ಮೇಲೆ‌ ಪ್ರೇಯಸಿಯನ್ನು ಕೂರಿಸಿಕೊಂಡು‌ ಜಾಲಿ‌ ರೈಡ್ ಮಾಡಿದಾತ ಅಂದ

- Advertisement -
- Advertisement -

ಚಾಮರಾಜನಗರ: ಬೈಕ್ ಟ್ಯಾಂಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಬೈಕ್ ಚಲಾಯಿಸಿದ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ರಸ್ತೆಯಲ್ಲಿ ನಿನ್ನೆ ಯುವಕನನ್ನು ಬಂಧಿಸಿದ್ದಾರೆ. ಬೈಕ್ ನಲ್ಲಿ  ಸವಾರನಿಗೆ ಎದುರಾಗಿ ಕುಳಿತಿದ್ದ ಹುಡುಗಿ ಆತನನನ್ನು ಬಿಗಿಯಾಗಿ ತಬ್ಬಿಕೊಂಡು, ಪರಸ್ಪರ ಚುಂಬಿಸುವ ದೃಶ್ಯಗಳ ವಿಡಿಯೋ ವೈರಲ್ ಆಗಿತ್ತು.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಬೈಕ್ ನೋಂದಣಿ ಸಂಖ್ಯೆ ಆಧರಿಸಿ, ಅದರ ಮಾಲೀಕನನ್ನು ಪತ್ತೆ ಹಚ್ಚಿ, ಆರೋಪಿ ಸ್ವಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!