Saturday, June 6, 2026
Homeಕರಾವಳಿಮಂಗಳೂರಿನ ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿದ ಪ್ರಕರಣ; ಯುವಕನ ಮೃತದೇಹ ಪತ್ತೆ

ಮಂಗಳೂರಿನ ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿದ ಪ್ರಕರಣ; ಯುವಕನ ಮೃತದೇಹ ಪತ್ತೆ

- Advertisement -
- Advertisement -

ಮಂಗಳೂರಿನ ಉಳ್ಳಾಲ ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಚಿಕ್ಕಮಗಳೂರು ಮೂಲದ ಪ್ರಸನ್ನಗೌಡ ಶವ ಕೊನೆಗೂ ಪತ್ತೆಯಾಗಿದೆ. ಅವರು ನದಿಗೆ ಹಾರಿದ ಸರಿಸುಮಾರು 24 ಗಂಟೆಗಳ ನಂತರ ಶವವನ್ನು ನದಿಯಿಂದ ಹೊರತೆಗೆಯಲಾಗಿದೆ.

ನಿನ್ನೆ ಮಧ್ಯಾಹ್ನದಿಂದ ಶವಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ನಿನ್ನೆಸಂಜೆ ಅದೇ ಸ್ಥಳದಲ್ಲಿ ಒಂದು ಶವ ಸಿಕ್ಕಿತ್ತು ಅದನ್ನು ಪ್ರಸನ್ನ ಗೌಡ ಶವ ಎಂದೇ ಭಾವಿಸಲಾಗಿತ್ತು. ಆದರೆ ಕುಟುಂಬ ಸದಸ್ಯರು ಪರಿಶೀಲಿಸಿದ ನಂತರ ಅದು ಬೇರೆ ಯಾರದ್ದೋ ಶವ ಎಂದು ತಿಳಿದುಬಂದಿತ್ತು.

ನಿರಂತರ ಹುಡುಕಾಟದ ನಂತರ ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಸನ್ನಗೌಡ ಅವರ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಸ್ಥಳೀಯ ಮೀನುಗಾರರು, ಮುಳುಗು ತಜ್ಞರ ಸಹಾಯದಿಂದ ಶವವನ್ನು ಮೇಲಕ್ಕೆತ್ತಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಹುಟ್ಟೂರು ಚಿಕ್ಕಮಗಳೂರು ಸಮೀಪದ ಬೈರಾಪುರ ಗ್ರಾಮಕ್ಕೆ ಮೃತದೇಹವನ್ನು ತರಲಾಗುತ್ತದೆ ಎನ್ನಲಾಗಿದೆ.

- Advertisement -

Latest News

error: Content is protected !!