Friday, June 5, 2026
Homeಕರಾವಳಿಬೆಳ್ತಂಗಡಿಯಲ್ಲಿ ವಕೀಲರ ಸಂಘದಿಂದ ಕಾನೂನು ಅರಿವು ಕಾರ್ಯಕ್ರಮ

ಬೆಳ್ತಂಗಡಿಯಲ್ಲಿ ವಕೀಲರ ಸಂಘದಿಂದ ಕಾನೂನು ಅರಿವು ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ; ತಾಲ್ಲೂಕಿನ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆ ಅವರ ಸಂಯುಕ್ತ ಆಶ್ರಯದಲ್ಲಿ ಅ. 31 ಮಂಗಳವಾರದಂದು ಬೆಳಿಗ್ಗೆ 9.30 ರಿಂದ ‘ಕಾನೂನು ಅರಿವು ಕಾರ್ಯಕ್ರಮವು’ ಸರಕಾರು ಪ್ರೌಢ ಶಾಲೆ ಗುರುವಾಯನಕೆರೆಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀ ಸಂದೇಶ ಕೆ ನೆರವೇರಿಸಿದರು.

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಹೆಚ್.ಎಸ್. ವಿರೂಪಾಕ್ಷ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ. ಹೆಚ್, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ವಕೀಲರ ಸಂಘದ ಅಧ್ಯಕ್ಷ ನವೀನ್ ಬಿ.ಕೆ, ಗುರುವಾಯನಕೆರೆ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯೆ ಶ್ರೀಮತಿ ಪದ್ಮಲತಾ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲೆ ಸ್ವರ್ಣಲತಾ ಎ, ‘ಹೆಣ್ಣು ಮಕ್ಕಳ ದಿನಾಚರಣೆ ಬಗ್ಗೆ ಹಾಗೂ ಬಾಲ್ಯ ವಿವಾಹ ಕುರಿತು ಮಾಹಿತಿ ನೀಡಿದರು.

- Advertisement -

Latest News

error: Content is protected !!