Sunday, April 28, 2024
Homeಚಿಕ್ಕಮಗಳೂರುಎಟಿಎಂನಿಂದ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚನೆ : ಖರ್ತನಾಕ್ ಖದೀಮನನ್ನು ಬಂಧಿಸಿದಾಗ ಬಯಲಾಯ್ತು ಆತನ...

ಎಟಿಎಂನಿಂದ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚನೆ : ಖರ್ತನಾಕ್ ಖದೀಮನನ್ನು ಬಂಧಿಸಿದಾಗ ಬಯಲಾಯ್ತು ಆತನ ಅಸಲೀಯತ್ತು

spot_img
- Advertisement -
- Advertisement -

ಚಿಕ್ಕಮಗಳೂರು:  ಎಟಿಎಂನಿಂದ ಹಣ ಡ್ರಾ ಮಾಡಲು ಸಹಾಯ ಮಾಡುವುದಾಗಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜೂನ್ 8 ರಂದು ಉದಯಕುಮಾರ್ ಎಂಬವರು  ಮೂಡಿಗೆರೆಯ  ಕರ್ನಾಟಕ ಬ್ಯಾಂಕ್ ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ಹಣವನ್ನು ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ನನ್ನ ಕರ್ನಾಟಕ ಬ್ಯಾಂಕ್ ನ ಎಟಿಎಂ ಕಾರ್ಡ್ ನ್ನು ಬದಲಾಯಿಸಿಕೊಂಡು ಹೋಗಿ ಚಿಕ್ಕಮಗಳೂರು ಎಟಿಎಂನಲ್ಲಿ 25 ಸಾವಿರ ರೂ ಹಣವನ್ನು ಡ್ರಾ ಮಾಡಿದ್ದಾನೆ. ಹಾಗೂ ಚಿಕ್ಕಮಗಳೂರು ಅರಹಮ್ ಜ್ಯುವೆಲರಿ ಶಾಪ್ ನಲ್ಲಿ 75 ಸಾವಿರ ರೂ ಹಣವನ್ನು ಸ್ಟೈಪ್ ಮಾಡಿ ಚಿನ್ನವನ್ನು ಕರೆದಿ ಮಾಡಿದ್ದಾನೆ.

ಈ ಬಗ್ಗೆ ಅರಿವಾಗುತ್ತಿದ್ದಂತೆ ಉದಯ್ ಕುಮಾರ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಪ್ರಕರಣದ ಬೆನ್ನತ್ತಿದ ಪೊಲೀಸರು ಜೂನ್ 11 ರಂದು ಮಡಿಕೇರಿಯಲ್ಲಿ ತಂಬಿರಜು ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಯ ನಿಜ ಬಣ್ಣ ಬಯಲಾಗಿದೆ.  ಆರೋಪಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ, ತರೀಕೆರೆ, ಮಂಡ್ಯ ಜಿಲ್ಲೆಯ  ಮಳವಳ್ಳಿ     ಕೆ ಆರ್ ಪೇಟೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಹಾಗೂ ಬೆಂಗಳೂರಿನಲ್ಲಿ ಎಟಿಎಂ ಗ್ರಾಹಕರಿಗೆ ಮೋಸ ಮಾಡಿ, ಎಟಿಎಂ ಕಾರ್ಡ್ ಮೋಸದಿಂದ ಬದಲಾಯಿಸಿ ಎಟಿಎಂ ಮಿಷನ್ ಗಳಲ್ಲಿ ಹಣ ಪಡೆದು ಹಾಗೂ ಜ್ಯುವೆಲರಿ ಗಳಲ್ಲಿ ಮೋಸ ಮಾಡಿರೋದು ಗೊತ್ತಾಗಿದೆ.

 ಈತನ ಮೇಲೆ ಹಿಂದೆ ತಮಿಳುನಾಡಿನಲ್ಲೂ ಒಟ್ಟು 11 ಕೇಸುಗಳು ವಿಚಾರಣೆ ಹಂತದಲ್ಲಿವೆ. ತಮಿಳುನಾಡಿನ ತೇನಿ ಜಿಲ್ಲೆ ಯವನಾದ ಇವನಿಂದ ಈತನಿಂದ 70 ವಿವಿಧ ಬ್ಯಾಂಕಿನ ಎಟಿಎಂ ಕಾರ್ಡ್ ಗಳು. 60 ಗ್ರಾಂ ಚಿನ್ನವನ್ನು ಹಾಗೂ 35 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಮೇಲೆ ರಾಜ್ಯದಲ್ಲಿ 7 ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

- Advertisement -
spot_img

Latest News

error: Content is protected !!