Thursday, June 25, 2026
Homeಕರಾವಳಿಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್ ; ಕುತ್ತಿಗೆಗೆ ಮೆಷಿನ್ ಗರಗಸ...

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್ ; ಕುತ್ತಿಗೆಗೆ ಮೆಷಿನ್ ಗರಗಸ ಸಿಲುಕಿ ಪ್ರಶಾಂತ್ ಪೂಜಾರಿ ಸಾವು

- Advertisement -
- Advertisement -

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಮೆಷಿನ್ ಅಯತಪ್ಪಿ ಕೆಳಗೆ ಬುದ್ದಿದ್ದು.ಚಾಲನ ಸ್ಥಿತಿಯಲ್ಲಿದ್ದ ಮೆಷಿನಿನ ಗರಗಸ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ಡಿ. 20 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ಎಂಬಲ್ಲಿ ತನ್ನ ಮನೆಯ ಬಳಿ ಡಿ.19 ರಂದು ಬೆಳಗ್ಗೆ 11:30 ರ ಸಮಯಕ್ಕೆ ಕಟ್ಟಿಗೆ ಮಾಡುವ ಸಲುವಾಗಿ ಪ್ರಶಾಂತ್ ಪೂಜಾರಿ ಮತ್ತು ಸಹೋದರ ಪ್ರಮೋದ್ ಜೊತೆ ಮರ ಕಡಿಯುವ ಕಟ್ಟಿಂಗ್ ಮಿಷಿನ್ ಮೂಲಕ ಮರ ಕಡಿಯುವ ಸಮಯದಲ್ಲಿ ಪ್ರಶಾಂತ್ ಪೂಜಾರಿ ಕಟ್ಟಿಂಗ್ ಮಿಷಿನ್ ಜೊತೆಗೆ ಹಿಡಿತ ತಪ್ಪಿ ನೆಲಕ್ಕೆ ಬಿದ್ದಾಗ ಚಾಲನಾ ಸ್ಥಿತಿಯಲ್ಲಿದ್ದ ಕಟ್ಟಿಂಗ್ ಮೆಷಿನಿನ ಗರಗಸ ಆಕಸ್ಮಿಕವಾಗಿ ಕುತ್ತಿಗೆಯ ಬಳಿ ತಾಗಿ, ತೀವ್ರ ರಕ್ತ ಗಾಯಗಳಾಗಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ತಕ್ಷಣ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದಾಗ ಚಿಕಿತ್ಸೆ ಫಲಿಸದೆ ಪ್ರಶಾಂತ್ ಪೂಜಾರಿ (36) ಎಂಬವರು ಡಿ.20ರಂದು(ಇಂದು) ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಶಾಂತ್ ಸಹೋದರ ಪ್ರಮೋದ್ (33) ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!