Friday, June 5, 2026
Homeಕರಾವಳಿಕಡಬ;ಇದ್ದಕ್ಕಿದ್ದಂತೆ ವ್ಯಕ್ತಿ ನಾಪತ್ತೆ

ಕಡಬ;ಇದ್ದಕ್ಕಿದ್ದಂತೆ ವ್ಯಕ್ತಿ ನಾಪತ್ತೆ

- Advertisement -
- Advertisement -

ಕಡಬ;ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮರ್ದಾಳ ವ್ಯಾಪ್ತಿಯ ಕೊಣಾಜೆ ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕು ಕೊಣಾಜೆ ಗ್ರಾಮದ ಮುಚ್ಚಿಲೋಡಿ ನಿವಾಸಿ ಗೀರಿಶ್ ಯಾನೆ ಗಣೇಶ್ ನಾಪತ್ತೆಯಾದ ವ್ಯಕ್ತಿ.

 ಜೂ.19 ರಂದು ಪತ್ನಿ ಶಂಕರಿ ಅವರು ಕೆಲಸದವರ ಜೊತೆ  ತೋಟಕ್ಕೆ ಸೊಪ್ಪು ತರಲು ಗುಡ್ಡಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಪತಿ ಅಡಿಕೆ ಸುಲಿಯುತ್ತಿದ್ದರು. ಪತ್ನಿ ಸಾಯಂಕಾಲ ಬಂದಾಗ ಮನೆಯಲ್ಲಿ ಇರಲಿಲ್ಲ. ಮನೆ ಪರಿಸರ,ತೋಟದಲ್ಲಿ ಹುಟುಕಾಡಿದರೂ ಸಂಬಂಧಿಕರ ಮನೆಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗಲೂ ಪತ್ತೆಯಾಗಿಲ್ಲ. ಧರ್ಮಸ್ಥಳ ಸ್ವಸಹಾಯ ಸಂಘ, ನವೋದಯ ಸಂಘ ಹಾಗೂ ಬ್ಯಾಂಕಿನಲ್ಲಿಯೂ ಸಾಲ ಪಡೆದುಕೊಂಡಿದ್ದು  ಅದೇ ಚಿಂತೆಯಲ್ಲಿ ಕಾಣೆಯಾಗಿರಬಹುದು ಎಂದು ಪತ್ನಿ ಶಂಕರಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!