Wednesday, June 17, 2026
Homeಕರಾವಳಿಮಂಗಳೂರುಮಂಗಳೂರು: ಉದ್ಯಮಿಯೊಬ್ಬರು ದಿಢೀರ್ ನಾಪತ್ತೆ

ಮಂಗಳೂರು: ಉದ್ಯಮಿಯೊಬ್ಬರು ದಿಢೀರ್ ನಾಪತ್ತೆ

- Advertisement -
- Advertisement -

ಮಂಗಳೂರು: ಉದ್ಯಮಿಯೊಬ್ಬರು ದಿಢೀರ್ ನಾಪತ್ತೆಯಾಗಿರುವ ಘಟನೆ ಬಿಜೈನಲ್ಲಿ ನಡೆದಿದೆ. ಕೊಟ್ಟಾರ ಚೌಕಿಯಲ್ಲಿ ಕಚೇರಿ ಹೊಂದಿದ್ದ ಉದ್ಯಮಿ ಸುನೀಲ್ ಬಿ.ಎಸ್. (36) ನಾಪತ್ತೆಯಾದವರು.

ಜೂನ್ 12ರಂದು ರಾತ್ರಿ ಸುಮಾರು 9 ಗಂಟೆಗೆ ಸುನೀಲ್ ತಮ್ಮ ಸಹೋದರಿಯ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರು. ಇದಾದ ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಅಂದಿನಿಂದ ಅವರು ಕುಟುಂಬದ ಸದಸ್ಯರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುನೀಲ್ ಅವರ ಪತ್ತೆಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದ ಉದ್ಯಮಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!