ಬಂಟ್ವಾಳ ; ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ದರ್ಖಾಸು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಸಜಿಪಮುಡ ಗ್ರಾಮದ ಕಾರಾಜೆ ನಿವಾಸಿ ಹರಿಣಾಕ್ಷಿ ಅವರ ಪತಿ ಲೋಕನಾಥ ಪೂಜಾರಿ ನಾಪತ್ತೆಯಾದವರು. ಲೋಕನಾಥ ಪೂಜಾರಿ, ಏ.17 ರಂದು ಕಾರಾಜೆಯಿಂದ ತಾಯಿ ಮನೆಯಾದ ಬಂಟ್ವಾಳ ತಾಲೂಕು ಅನಂತಾಡಿ ದರ್ಖಾಸು ಎಂಬಲ್ಲಿಗೆ ಬಂದಿದ್ದು ಆ ದಿನ ಅಲ್ಲೇ ಉಳಿದುಕೊಂಡಿದ್ದಾರೆ. ಬಳಿಕ ಎ.18 ರಂದು ಬೆಳಿಗ್ಗೆ 8.00 ಗಂಟೆಗೆ ಅನಂತಾಡಿ ದರ್ಖಾಸಿನಿಂದ ಕಾರಾಜೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಈವೆರೆಗೂ ಮನೆಗೆ ವಾಪಸ್ ಬಂದಿಲ್ಲ. ಅಲ್ಲದೇ ಲೋಕನಾಥ ಪೂಜಾರಿ ಸ್ವಲ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮನೆಯಿಂದ ಹೊರಡುವಾಗ ಮೊಬೈಲ್ ಬಿಟ್ಟು ಹೋಗಿದ್ದು, ಬಳಿಕ ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಿದಾಗ ಹಾಗೂ ಎಲ್ಲಾ ಕಡೆ ಹುಡುಕಾಡಿದಾಗ ಪತ್ತೆಯಾಗದ್ದರಿಂದ ಇದೀಗ ಅವರ ಪತ್ನಿ ದೂರು ದಾಖಲಿಸಿದ್ದಾರೆ.


