Thursday, June 4, 2026
Homeಕರಾವಳಿಬಂಟ್ವಾಳ ; ಮಾಣಿ ಗ್ರಾಮದ ಬದಿಗುಡ್ಡೆ-ವಾರಾಟ ಮಾಡದಲ್ಲಿ ವಲಸರಿ ನೇಮದ ಗೊನೆ ಮುಹೂರ್ತ

ಬಂಟ್ವಾಳ ; ಮಾಣಿ ಗ್ರಾಮದ ಬದಿಗುಡ್ಡೆ-ವಾರಾಟ ಮಾಡದಲ್ಲಿ ವಲಸರಿ ನೇಮದ ಗೊನೆ ಮುಹೂರ್ತ

- Advertisement -
- Advertisement -

ಬಂಟ್ವಾಳ ; ಮಾಣಿ ಗ್ರಾಮದ ಬದಿಗುಡ್ಡೆ-ವಾರಾಟ ಮಾಡದಲ್ಲಿ ನಡೆಯಲಿರುವ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ವಲಸರಿ ನೇಮದ ಗೊನೆಮುಹೂರ್ತ ಇಂದು (ತಾ.21-4-2023ನೇ, ಶುಕ್ರವಾರ) ನಡೆಯಿತು.

 ತಾ. 28-4-2023ನೇ ಶುಕ್ರವಾರ ಬೆಳಿಗ್ಗೆ ಗಂಟೆ 9-00ಕ್ಕೆ ಮಾಣಿಗುತ್ತು ಚಾವಡಿಯಿಂದ ಭಂಡಾರ ಹೊರಟು, ಮಧ್ಯಾಹ್ನ ಗಂಟೆ 12-00ಕ್ಕೆ ಶ್ರೀ ದೈವಗಳಿಗೆ ತಂಬಿಲ, ಬಳಿಕ ಅನ್ನಸಂತರ್ಪಣೆ ಜರಗಲಿರುವುದು. ರಾತ್ರಿ ಗಂಟೆ 9-00ರಿಂದ ಶ್ರೀ ದೈವಗಳ ವಲಸರಿ ನೇಮ ಆರಂಭವಾಗಲಿದೆ ಎಂದು ಮಾಣಿಗುತ್ತು ಸಚಿನ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಅರ್ಚಕರಾದ ಹರಿಭಟ್,ಪ್ರಮುಖರಾದ ಅರೆಬೆಟ್ಟು ಗುತ್ತು ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಜಗನ್ನಾಥ ಚೌಟ ಬದಿಗುಡ್ಡೆ, ಮಹಾಬಲ ಶೆಟ್ಟಿ ವಾರಾಟ, ರಘುರಾಮ ಕೊಟ್ಟಾರಿ ಸಾಗು,ಜಗದೀಶ್ ಜೈನ್ ಮಾಣಿ, ವಿನಯ ಕುಮಾರ್,ಗಿರೀಶ್ ಪೂಜಾರಿ, ರಾಜೇಶ್ ಶೆಟ್ಟಿ ಬದಿಗುಡ್ಡೆ,  ಮತ್ತಿತರರು ಗೊನೆ ಕಡಿಯುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!