Monday, May 6, 2024
Homeತಾಜಾ ಸುದ್ದಿತಾಯಿಯ ಶವದ ಮುಂದೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಗ

ತಾಯಿಯ ಶವದ ಮುಂದೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಗ

spot_img
- Advertisement -
- Advertisement -

ತೆಲಂಗಾಣ: ತಾಯಿಯ ಮೃತದೇಹದ ಮುಂದೆ ಮಗನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ನಡೆದಿದೆ. ಕೊರೊನಾದಿಂದ ಮೃತಪಟ್ಟ ತಾಯಿಯ ಮೃತದೇಹದ ಮುಂದೆಯೇ ಮಗ ಹಸೆಮಣೆ ಏರಿದ್ದಾರೆ.


ಇಂತಹ ಮನಕಲಕುವ ಘಟನೆ ನಡೆದದ್ದು ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್‌ಪೇಟ್‌ನಲ್ಲಿ . ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಎಂವರಿಗೆ ಮೇ 21ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆಂದು ಅಮೆರಿಕಾದಿಂದ ತನ್ನೂರಿಗೆ ಮರಳಿದ್ದರು. ಈ ನಡುವೆ ರಾಕೇಶ್​ ಅವರ  ತಾಯಿ ​ಪಾಲ್ಪಾನೂರಿ ರೇಣುಕಾಗೆ ಕೊರೊನಾ ಸೋಂಕು ತಗುಲಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ರೇಣುಕಾ(49) ಅವರು ಬದುಕಲಿಲ್ಲ. ಬಳಿಕ ಆಂಬುಲೆನ್ಸ್​ನಲ್ಲಿ ಗ್ರಾಮಕ್ಕೆ ಮೃತದೇಹ ತರಲಾಯಿತು. ಕಣ್ಣೀರಿಡುತ್ತಲೇ ರಾಕೇಶ್​​ ಅಮ್ಮನ ಶವದ ಮುಂದೆಯೇ ಮದುವೆ ನಿಶ್ಚಯವಾಗಿದ್ದ ಯುವತಿ ಜತೆ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.

- Advertisement -
spot_img

Latest News

error: Content is protected !!