Wednesday, May 8, 2024
Homeಕರಾವಳಿಬ್ಲ್ಯಾಕ್ ಫಂಗಸ್ ಗೆ ಬೆಳ್ತಂಗಡಿಯ ವ್ಯಕ್ತಿ ಬಲಿ: ಜಿಲ್ಲೆಯಲ್ಲಿ ಇದುವರೆಗು ಐವರ ಪ್ರಾಣ ಕಸಿದುಕೊಂಡ ...

ಬ್ಲ್ಯಾಕ್ ಫಂಗಸ್ ಗೆ ಬೆಳ್ತಂಗಡಿಯ ವ್ಯಕ್ತಿ ಬಲಿ: ಜಿಲ್ಲೆಯಲ್ಲಿ ಇದುವರೆಗು ಐವರ ಪ್ರಾಣ ಕಸಿದುಕೊಂಡ ಡೆಡ್ಲಿ ವೈರಸ್

spot_img
- Advertisement -
- Advertisement -

ಬೆಳ್ತಂಗಡಿ: ಕೊರೊನಾ ಎರಡನೇ ಅಲೆಯ ಆರ್ಭಟದ ನಡುವೆಯೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಆರ್ಭಟ ಕೂಡ ಹೆಚ್ಚಾಗಿದೆ. ಇದೀಗ ಬೆಳ್ತಂಗಡಿ ತಾಲೂಕಿಗೂ ಬ್ಲ್ಯಾಕ್ ಫಂಗಸ್ ವಕ್ಕರಿಸಿದ್ದು ಓರ್ವನನ್ನು ಬಲಿ ಪಡೆದಿದೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ.

ಕೆಲ ದಿನಗಳಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ನೋಣಯ್ಯ ಪೂಜಾರಿಗೆ ಕೊರೋನಾ ಪಾಸಿಟಿವ್ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನೋಣಯ್ಯ ಪೂಜಾರಿ ಮೃತಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ ಬಲಿಯಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ದ.ಕ.ಜಿಲ್ಲೆಯಲ್ಲಿ ಈವರೆಗೆ 30 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.. ಜಿಲ್ಲೆಯಲ್ಲಿ 25 ಸಕ್ರಿಯ ಪ್ರಕರಣಗಳಿವೆ. ಈ 25 ಮಂದಿಯಲ್ಲಿ 8 ಮಂದಿ ದ.ಕ.ಜಿಲ್ಲೆಯವರಾಗಿದ್ದು, ಉಳಿದವರು ಬೇರೆ ಜಿಲ್ಲೆಯವರಾಗಿದ್ದಾರೆ.

ಇನ್ನು ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿದ್ದು, ಇದೀಗ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವೂ ತಾಲೂಕಿಗೆ ವಕ್ಕರಿಸಿದ್ದು, ತಾಲೂಕಿನ ನಾಗರಿಕರು ಸ್ವಯಂ ಪ್ರೇರಿತರಾಗಿ ಇನ್ನಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ, ಅಪಾಯ ಕಟ್ಟಿಟ್ಟದ್ದು ಎಂಬುದು ತಜ್ಞರ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಕೆಲದಿನಗಳಿಂದ ತಾಲೂಕಿನ ನೆರಿಯಾ, ತೋಟತ್ತಾಡಿ, ಚಾರ್ಮಾಡಿ ಹಾಗೂ ಮುಂಡಾಜೆ ಗ್ರಾಮಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ.

- Advertisement -
spot_img

Latest News

error: Content is protected !!