Thursday, June 4, 2026
Homeಕರಾವಳಿಉಡುಪಿಬ್ರಹ್ಮಾವರ: ಹಳಿ ದಾಟುತ್ತಿದ್ದ ವ್ಯಕ್ತಿಗೆ ರೈಲು ಡಿಕ್ಕಿಯಾಗಿ ಸಾವು

ಬ್ರಹ್ಮಾವರ: ಹಳಿ ದಾಟುತ್ತಿದ್ದ ವ್ಯಕ್ತಿಗೆ ರೈಲು ಡಿಕ್ಕಿಯಾಗಿ ಸಾವು

- Advertisement -
- Advertisement -

ಬ್ರಹ್ಮಾವರ : ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾತ್ರಿ ವೇಳೆ ಚಾಂತಾರು ಗ್ರಾಮದ ಹಾಲಿನ ಡೈರಿ ಹತ್ತಿರ ನಡೆದಿದೆ.

ಮೃತರನ್ನು 52ನೇ ಹೇರೂರು ಗ್ರಾಮದ ಕೊಳಂಬೆಯ ರಾಜೀವ ನಗರದ ರಾಜಶೇಖರ (45) ಎಂದು ಗುರುತಿಸಲಾಗಿದೆ.

ಮಾನಸಿಕ ಅಸ್ವಸ್ಥರಾಗಿರುವ ಇವರು, ರೈಲ್ವೇ ಟ್ರ್ಯಾಕ್ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!