Thursday, June 4, 2026
Homeಅಪರಾಧಕಾರ್ಕಳದಲ್ಲಿ ಅಣ್ಣನನ್ನು ಇರಿದು ಕೊಲೆಗೈದ ತಮ್ಮ

ಕಾರ್ಕಳದಲ್ಲಿ ಅಣ್ಣನನ್ನು ಇರಿದು ಕೊಲೆಗೈದ ತಮ್ಮ

- Advertisement -
- Advertisement -

ಕಾರ್ಕಳ: ತಮ್ಮನೇ ತನ್ನ ಅಣ್ಣನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ನಡೆದಿದೆ.

ಶೇಖರ್(50) ಕೊಲೆಗೀಡಾದವರು. ಶೇಖರ್ ಸಹೋದರ ರಾಜು(35) ಕೊಲೆಗೈದ ಆರೋಪಿ. ಜಾಗದ ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆದಿದೆ ಎನ್ನಲಾಗಿದೆ.

ಶೇಖರ್ ಮತ್ತು ರಾಜು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದರು. ಅಣ್ಣನೊಂದಿಗೆ ವೈಮನಸ್ಸಿನಿಂದ ರಾಜು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದ. ಇಂದು ಶೇಖರ ಮನೆಯಲ್ಲಿ ಮೂವರು ಕೆಲಸಗಾರರೊಂದಿಗೆ ಅಂಗಳದ ಕೆಲಸ ಮಾಡುತ್ತಿದ್ದರು. ಈ ವೇಳೆ ಆಗಮಿಸಿದ ರಾಜು ದುರಸ್ಥಿ ಕೆಲಸ ಮಾಡದಂತೆ ಆಕ್ಷೇಪವೆತ್ತಿದ್ದಾನೆ. ಜಗಳ ತಾರಕಕ್ಕೇರಿ ರಾಜು ಚೂರಿಯಿಂದ ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ. ಅತೀವ ರಕ್ತಸ್ರಾವದಿಂದ ಶೇಖರ ಮೃತಪಟ್ಟಿದ್ದಾರೆ. ಕೊಲೆ ಬಳಿಕ ಆರೋಪಿ ಪರಾರಿಯಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!