Wednesday, December 7, 2022
Homeತಾಜಾ ಸುದ್ದಿಬಾರಿ ಬಾರಿ ಕೇಳಿದ್ರೂ ಪ್ರೀತಿಗೆ ನೋ ಅಂದ ಯುವತಿ : ಕೊನೆಗೆ ಪಾಗಲ್ ಪ್ರೇಮಿ...

ಬಾರಿ ಬಾರಿ ಕೇಳಿದ್ರೂ ಪ್ರೀತಿಗೆ ನೋ ಅಂದ ಯುವತಿ : ಕೊನೆಗೆ ಪಾಗಲ್ ಪ್ರೇಮಿ ಮಾಡಿದ್ದೇನು ನೋಡಿ….

- Advertisement -
- Advertisement -

ತುಮಕೂರು : ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯ ತನ್ನ ಪ್ರೀತಿಗೆ ನೋ ಅಂದ್ಳು ಅನ್ನೋ ಕಾರಣಕ್ಕೆ ಆಕೆಯನ್ನು ಇರಿದು ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗುಳ್ಳ ಗ್ರಾಮದಲ್ಲಿನ ಈರಣ್ಣ ಎಂಬಾತ, ಪಿಯುಸಿ ಓದುತ್ತಿದ್ದಂತ ಅಪ್ರಾಪ್ತೆಯ ಹಿಂದೆ ಬಿದ್ದು, ಪ್ರೀತ್ಸೆ ಪ್ರೀತ್ಸೆ ಅಂತ ಕಾಡುತ್ತಿದ್ದನಂತೆ. ಇಂತಹ ಪ್ರೇಮಿಯ ಪ್ರೀತಿಯನ್ನು ಮಾತ್ರ ಅಪ್ರಾಪ್ತೆ ಒಪ್ಪಿಕೊಂಡಿರಲಿಲ್ಲ. ಇಂದು ಕೂಡ ಅಪ್ರಾಪ್ತೆಯ ಹಿಂದೆ ಬಿದ್ದಿದ್ದಂತ ಪಾಗಲ್ ಪ್ರೇಮಿ ಈರಣ್ಣ, ಪ್ರೀತಿಸೋದಕ್ಕೆ ಒತ್ತಾಯಿಸಿದ್ದಾನೆ.

ಪಾಗಲ್ ಪ್ರೇಮಿ ಎಷ್ಟೇ ಒತ್ತಾಯಿಸಿದರೂ ಆತನ ಪ್ರೀತಿಯನ್ನು ಅಪ್ರಾಪ್ತೆ ಇಂದು ಕೂಡ ಒಪ್ಪಿಕೊಂಡಿಲ್ಲ. ಅಲ್ಲದೇ ತಾಳಿ ಕಟ್ಟೋದಕ್ಕೂ ಮುಂದಾದಾಗ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾಳೆ. ಇದರಿಂದಾಗಿ ಸಿಟ್ಟುಗೊಂಡ ಪಾಗಲ್ ಪ್ರೇಮಿ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿದ್ದಾನೆ.

ಅಪ್ರಾಪ್ತೆಯನ್ನು ಕೊಲೆ ಮಾಡಿರುವಂತ ಪಾಗಲ್ ಪ್ರೇಮಿ, ಇದೀಗ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಮಾಡಿ ಪರಾರಿಯಾಗಿದ್ದಾನೆ. ಇದೀಗ ಪಾಗಲ್ ಪ್ರೇಮಿ ಈರಣ್ಣ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -
spot_img

Latest News

error: Content is protected !!