Friday, April 26, 2024
Homeತಾಜಾ ಸುದ್ದಿಇದಪ್ಪಾ! ಹುಡುಗರ ಮನಸ್ಸು ಅಂದ್ರೆ: ತನ್ನಿಂದ ದೂರವಾದ ರಶ್ಮಿಕಾಗೆ ರಕ್ಷಿತ್ ಬರ್ತಡೇ ವಿಶ್ ಮಾಡಿದ್ದು ಹೇಗಿದೆ...

ಇದಪ್ಪಾ! ಹುಡುಗರ ಮನಸ್ಸು ಅಂದ್ರೆ: ತನ್ನಿಂದ ದೂರವಾದ ರಶ್ಮಿಕಾಗೆ ರಕ್ಷಿತ್ ಬರ್ತಡೇ ವಿಶ್ ಮಾಡಿದ್ದು ಹೇಗಿದೆ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣಗೆ ಇಂದು 25ನೇ ಹುಟ್ಟುಹಬ್ಬದ ಸಂಭ್ರಮ. ‘ಕಿರಿಕ್​ ಪಾರ್ಟಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದ ರಶ್ಮಿಕಾ ಮಂದಣ್ಣಗೆ ನಟ ರಕ್ಷಿತ್​ ಶೆಟ್ಟಿ ಸ್ಪೆಷಲ್​ ಆಗಿ ವಿಶ್​ ಮಾಡಿದ್ದಾರೆ.

ಹೌದು.. ‘ಕಿರಿಕ್​ ಪಾರ್ಟಿ’ ಸಿನಿಮಾದ ರಶ್ಮಿಕಾರ ಆಡಿಷನ್​ ವಿಡಿಯೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ‘ಕಿರಿಕ್​ ಪಾರ್ಟಿ ಸಿನಿಮಾ ಆಡಿಷನ್​ನ ಈ ಬ್ಯೂಟಿಫಲ್​ ವಿಡಿಯೋ ಹಂಚಿಕೊಳ್ತಿದ್ದೇನೆ. ಎಲ್ಲವನ್ನೂ ಓರ್ವ ಯೋಧಳಾಗಿ ಎದುರಿಸಿ, ಅಲ್ಲಿಂದ ಇಲ್ಲಿಯವರೆಗೂ ಬಹಳ ದೂರ ಸಾಗಿದ್ದೀಯ. ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ. ಹುಟ್ಟುಹಬ್ಬದ ಶುಭಾಶಯಗಳು, ಇನ್ನಷ್ಟು ಯಶಸ್ಸು ನಿನ್ನದಾಗಲಿ’ ಅಂತ ಸ್ವೀಟಾಗಿ ಬರೆದು ಟ್ವೀಟ್​ ಮಾಡಿದ್ದಾರೆ ರಕ್ಷಿತ್​ ಶೆಟ್ಟಿ.

ಕನ್ನಡ ಚಿತ್ರಗಳ ಜೊತೆ ಜೊತೆಗೆ ತೆಲುಗು ಇಂಡಸ್ಟ್ರಿಯ ಕದ ತಟ್ಟಿದ್ದ ರಶ್ಮಿಕಾ, ಇದೀಗ ಬಾಲಿವುಡ್​​ನಲ್ಲಿ ಸದ್ದು ಮಾಡಲು ರೆಡಿಯಾಗ್ತಿದ್ದಾರೆ. ನಟ ಸಿದ್ಧಾರ್ಥ್​​ ಮಲ್ಹೋತ್ರಾ ಜೊತೆಗೆ ಬಾಲಿವುಡ್​ ಡೆಬ್ಯೂ ಮಾಡ್ತಿರುವ ರಶ್ಮಿಕಾ, ಮುಂದೆ ಮತ್ತೊಂದು ಬಾಲಿವುಡ್​ ಸಿನಿಮಾದಲ್ಲಿ ಬಿಗ್​ ಬಿ ಅಮಿತಾಬ್​ ಬಚ್ಚನ್​ ಜೊತೆ ಸ್ಕ್ರೀನ್​​ ಶೇರ್​ ಮಾಡಿಕೊಳ್ತಿದ್ದಾರೆ. ಅಂದ್ಹಾಗೇ, ಕಿರಿಕ್​ ಪಾರ್ಟಿ ಸಿನಿಮಾದ ನಂತರ ಮತ್ತೆ ರಕ್ಷಿತ್​ ಶೆಟ್ಟಿ ಜೊತೆ ನಟಿಸಬೇಕು ಅನ್ನೋ ಆಸೆಯನ್ನ ನಟಿ ರಶ್ಮಿಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!