Friday, June 5, 2026
Homeಕರಾವಳಿಬಂಟ್ವಾಳ;ತೆಂಗಿನಕಾಯಿ ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು

ಬಂಟ್ವಾಳ;ತೆಂಗಿನಕಾಯಿ ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಬಂಟ್ವಾಳ;ತೆಂಗಿನಕಾಯಿ ಕೊಯ್ಯುವಾಗ ವ್ಯಕ್ತಿಯೋರ್ವ ಆಯತಪ್ಪಿ ಮರದಿಂದ ಬಿದ್ದು ಮೃತಪಟ್ಟ ಘಟನೆ ನಾವೂರ
ಎಂಬಲ್ಲಿ ನಡೆದಿದೆ. ನಾವೂರ ನಿವಾಸಿ ಸುರೇಶ್ (40) ಮೃತಪಟ್ಟ ವ್ಯಕ್ತಿ.

ಸುರೇಶ್ ಅವರು ತೆಂಗಿನಕಾಯಿ, ಅಡಿಕೆ ಕೀಳುವ ಕೂಲಿ ಮಾಡುತ್ತಿದ್ದರು.ಎಂದಿನಂತೆ ತೆಂಗಿನಕಾಯಿ ಕೀಳುವ ಕೂಲಿಗಾಗಿ
ತೆರಳಿದ್ದ ವೇಳೆ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಸುರೇಶ್ ಗೆ ಬಂಟ್ವಾಳದ ಆಸ್ಪತ್ರಗೆ ಕರೆದುಕೊಂಡು ಹೋಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಮಂಗಳೂರಿನಲ್ಲಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ‌ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!