Thursday, June 4, 2026
Homeಕರಾವಳಿಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಕೆರೆಗೆ ಬಿದ್ದು ಟೈಲರ್ ಸಾವು

ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಕೆರೆಗೆ ಬಿದ್ದು ಟೈಲರ್ ಸಾವು

- Advertisement -
- Advertisement -

ಬೆಳ್ತಂಗಡಿ : ಟೈಲರ್ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಮಾಕೆರೆಕೆರೆ ಎಂಬಲ್ಲಿ ಇಂದು ನಡೆದಿದೆ. ಚಂದ್ರಶೇಖರ್ ಕುಲಾಲ್(42) ಮೃತ ದುರ್ದೈವಿ. ಚಂದ್ರಶೇಖರ್ ಕುಲಾಲ್ ಅವರು ಮನೆ ಸಮೀಪದ ಕೆರೆಗೆ ಕಾಲು ಜಾರಿ ಮೃತ ಪಟ್ಟಿದ್ದಾರೆ.

ಮಾಕೆರೆಕೆರೆ ನಿವಾಸಿ ಲೋಕಯ್ಯ ಕುಲಾಲ್‌ರವರ ಪುತ್ರರಾಗಿರುವ ಚಂದ್ರಶೇಖರ್ ಅವರು ತಮ್ಮ ತಂದೆಯವರ ಕಾಂಪ್ಲೆಕ್ಸ್‌ ನ ಒಂದು ಕೊಠಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಟೈಲರ್ ವೃತ್ತಿಯನ್ನು ನಡೆಸುತ್ತಿದ್ದರು. ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅವರು ಆ.20ರಂದು ಬೆಳಗ್ಗೆ ತೋಟಕ್ಕೆ ಹೋಗಿದ್ದ ಸಮಯ ತಮ್ಮ ಮನೆಯ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟರೆನ್ನಲಾಗಿದೆ. ಮೃತರು ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಇಬ್ಬರು ಮಕ್ಕಳನ್ನು ಬಂಧು ವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!