- Advertisement -
- Advertisement -
ಸುಬ್ರಮಣ್ಯ; ರಾಮಪತ್ರೆ ಕೊಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪದಲ್ಲಿ ನಡೆದಿದೆ. ಕಡಬ ತಾಲೂಕು ಬಳ್ಪ ಗ್ರಾಮದ ಕುಂಜತ್ತಾಡಿ ಮನೆ ದಾಮೋದರ ಗೌಡ (57) ಮೃತ ದುರ್ದೈವಿ.
ದಾವೋದರ ಗೌಡ ಮನೆಯ ಬಳಿಯಿದ್ದ ರಾಮ ಪತ್ರೆ ಕೊಯ್ಯಲು ಮರವನ್ನು ಹತ್ತಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಕಾರೊಂದರಲ್ಲಿ ಕರೆದುಕೊಂಡು ಹೋಗಿ ಪಂಜದಲ್ಲಿ ಸಿಕ್ಕಿದ ಖಾಸಗಿ ಅಂಬುಲೆನ್ಸ್ ಮೂಲಕ ಕಡಬ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು.
ವೇಳೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ . ಈ ಬಗ್ಗೆ ಮೃತರ ಪತ್ನಿರುಕ್ಮಿಣಿ ಅವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
