Wednesday, June 3, 2026
Homeತಾಜಾ ಸುದ್ದಿಓಣಂ ಹಬ್ಬದ ಹಿನ್ನೆಲೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜನೆ; ಇಡ್ಲಿ ಗಂಟಲಿಗೆ ಸಿಲುಕಿ ವ್ಯಕ್ತಿ ಸಾವು

ಓಣಂ ಹಬ್ಬದ ಹಿನ್ನೆಲೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜನೆ; ಇಡ್ಲಿ ಗಂಟಲಿಗೆ ಸಿಲುಕಿ ವ್ಯಕ್ತಿ ಸಾವು

- Advertisement -
- Advertisement -

ಕೇರಳ; ಓಣಂ ಹಬ್ಬದ ಹಿನ್ನೆಲೆ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಇಡ್ಲಿ ತಿನ್ನುವಾಗ ಇಡ್ಲಿ ತಿನ್ನುವಾಗ ಇಡ್ಲಿ ಗಂಟಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ  ಕೇರಳದ ಪಾಲಕ್ಕಾಡ್‌ನ ಕಂಜಿಕೋಡ್‌ನಲ್ಲಿ ನಡೆದಿದೆ.  ಕಂಜಿಕೋಡ್‌ನ ಆಲಮರಮ್ ಮೂಲದ ಟ್ರಕ್ ಚಾಲಕ ಸುರೇಶ್ (50) ಮೃತ ವ್ಯಕ್ತಿ.

ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಸುರೇಶ್ ಅವರು ಮೂರು ಇಡ್ಲಿಗಳನ್ನು ಒಟ್ಟಿಗೆ ತಿನ್ನಲು ಪ್ರಯತ್ನಿಸಿದ್ದಾರೆ. ಅದರೆ ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.

ಕಾಂಜಿಕೋಡು ಸಮೀಪದ ಕೊಲ್ಲಾಪುರದಲ್ಲಿ ಯುವ ಸಮೂಹ ಸ್ಪರ್ಧೆ ಆಯೋಜಿಸಿತ್ತು. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2014ರಲ್ಲಿ ಪಾಲಕ್ಕಾಡ್‌ನಿಂದ ಇದೇ ರೀತಿಯ ಘಟನೆ ವರದಿಯಾಗಿತ್ತು. ಪಾಲಕ್ಕಾಡ್‌ನ ಚಿತ್ತೂರು ಬಳಿಯ ಅತಿಕೋಡ್‌ನಲ್ಲಿ 52 ವರ್ಷದ ವ್ಯಕ್ತಿಯೊಬ್ಬರು 2014ರ ತಿರುವೋಣಂನಂದು ಸ್ಪರ್ಧೆಯಲ್ಲಿ ಇಡ್ಲಿ ತಿನ್ನುವಾಗ ವ್ಯಕ್ತಿಯೊಬ್ಬರು ಇದೇ ರೀತಿ ಇಡ್ಲಿ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ್ದರು.

- Advertisement -

Latest News

error: Content is protected !!