Wednesday, June 3, 2026
Homeಕರಾವಳಿಉಡುಪಿಕುಂದಾಪುರ: ರೈಲಿನಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು: ರೈಲ್ವೇ ಟ್ರ್ಯಾಕ್‌ ಬಳಿ ಶವ ಪತ್ತೆ

ಕುಂದಾಪುರ: ರೈಲಿನಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು: ರೈಲ್ವೇ ಟ್ರ್ಯಾಕ್‌ ಬಳಿ ಶವ ಪತ್ತೆ

- Advertisement -
- Advertisement -

ಕುಂದಾಪುರ: ಮುಂಬಯಿನಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಕೆರೂರು ಬಳಿ ತಡರಾತ್ರಿ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.

ಡೋಂಗ್ರೆ ಕೆರೆ ನಿವಾಸಿ ನಿತ್ಯಾಂನಂದ ಶೇಟ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ನಿತ್ಯಾನಂದ ಅವರು ಅವಿವಾಹಿತರಾಗಿದ್ದು, ಮುಂಬಯಿನಲ್ಲಿ ಸಮಾರಂಭವೊಂದರಲ್ಲಿ ಭಾಗಿಯಾಗಿ, ಮಂಗಳೂರು ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಮುಂಜಾನೆ ವೇಳೆ ರೈಲು ಸಿಬಂದಿ ರೈಲು ಮಾರ್ಗ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸ್ಥಳೀಯರೊಬ್ಬರಿಗೆ ನಿತ್ಯಾನಂದ ಅವರ ಮೊಬೈಲ್ ಫೋನ್ ಸಿಕ್ಕಿದ್ದು, ಮೊಬೈಲ್ ಸ್ವಿಚ್ ಆನ್ ಮಾಡಿದಾಗ ನಿತ್ಯಾನಂದ ಅವರ ಕುಟುಂಬಸ್ಥರಿಂದ ಕರೆ ಬಂದಿದ್ದು, ಅವರಿಗೆ ಮಾಹಿತಿ ತಿಳಿಸಲಾಗಿದೆ.

- Advertisement -

Latest News

error: Content is protected !!