- Advertisement -
![]()
- Advertisement -
ಕಡಬ; ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾ*ವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ಕೊರಗಪ್ಪ ಕುಂಬಾರ ಅವರ ಪುತ್ರ ಹರೀಶ್ ಮೃತ ವ್ಯಕ್ತಿ.
ಹರೀಶ್ ಆರಂಭದಲ್ಲಿ ಹೋಟೆಲ್ ನಲ್ಲಿಯೇ ಕೆಲಸ ಮಾಡುತ್ತಿದ್ದ ಅವರು ಬಳಿಕ ಕಡಬದಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಬಳಿಕ ಮತ್ತೆ ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಹೋಟೆಲ್ ನಲ್ಲಿ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಟ್ರೈನ್ ಸ್ಟೋಕ್ ನಿಂದ ನಿಧರಾಗಿದ್ದಾರೆ.
ಪಾರ್ಥಿವ ಶರೀರವು ಇಂದು ಮದ್ಯಾಹ್ನ ವೇಳೆ ಕಡಬಕ್ಕೆ ತಲುಪಲಿದ್ದು ಪಂಜ ರಸ್ತೆಯಲ್ಲಿನ ಕದಂಬ ಆಟೋ ನಿಲ್ದಾಣದಲ್ಲಿ ಅಟೋ ಚಾಲಕ ಮಾಲೀಕರ ಸ೦ಘದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಲಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
- Advertisement -


