- Advertisement -
![]()
- Advertisement -
ಕಡಬ: ರಜೆಯಲ್ಲಿ ಊರಿಗೆ ಬಂದಿದ್ದ ವಿದೇಶದಲ್ಲಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಡಿ.16ರಂದು ಕಡಬ ತಾಲೂಕು ಚಾರ್ವಾಕ ಗ್ರಾಮದ ದೇವಿನಗರ ನಡೆದಿದೆ.
ಕಡಬ ತಾಲೂಕು ಚಾರ್ವಾಕ ಗ್ರಾಮದ ದೇವಿನಗರ ನಿವಾಸಿ ದೇಜಪ್ಪ ಯಾನೆ ದಿವೀಶ್ ಮಡಿವಾಳ (45 ) ಮೃತ ವ್ಯಕ್ತಿ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮೃತರು ಪುತ್ತೂರಿನ ಸಂಪ್ಯದಲ್ಲಿ ಮನೆ ಮಾಡಿದ್ದರು. ಚಾರ್ವಾಕದ ಮೂಲ ಮನೆಯಲ್ಲಿ ದೈವಗಳ ಕಾರ್ಯಕ್ರಮದ ನಿಮಿತ್ತ ಅಲ್ಲಿಗೆ ಬಂದವರು ನಿನ್ನೆ ರಾತ್ರಿಯೇ ಪುತ್ತೂರಿಗೆ ಬಂದಿದ್ದರು.ಬೆಳಗ್ಗಿನ ಜಾವ ಹೃದಯಾಘಾತವಾದ ತಕ್ಷಣ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಡಿ.28ರಂದು ವಿದೇಶಕ್ಕೆ ಹೋಗುವವರಿದ್ದರು. ಮೃತರು ತಂದೆ , ಪತ್ನಿ , ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ.
- Advertisement -


