- Advertisement -
- Advertisement -
ಕೇರಳ; ಮದುವೆಯಾಗಿ 5 ವರ್ಷಗಳಿಂದ ಮಕ್ಕಳಿಲ್ಲದ ಚಿಂತೆಯಲ್ಲಿದ್ದ ಯುವಕನೊಬ್ಬ ಪತ್ನಿ ಮಗುವಿಗೆ ಜನ್ಮನೀಡಿದ ಕೆಲವೇ ಕ್ಷಣದಲ್ಲಿ ಅಪಘಾತಕ್ಕೆ ಬಲಿಯಾದ ಘಟನೆ ಕೇರಳದ ಪಶ್ಚಿಮ ಮಂಗಾದ್ ಪೂವತ್ತೂರ್ ನಲ್ಲಿ ನಡೆದಿದೆ.
ಶರತ್ (30) ಮೃತ ದುರ್ದೈವಿ.ಭಾನುವಾರ ಮಧ್ಯರಾತ್ರಿ ಸ್ನೇಹಿತನ ಜೊತೆ ಮನೆಯಿಂದ ಹೋಗುವಾಗ ಕುನ್ನಮ್ಕುಲಂ ಬಳಿ ಬೈಕ್ ನಿಯಂತ್ರಣ ಕಳೆದುಕೊಂಡು ಎದುರುಗಡೆ ಇದ್ದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಶರತ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಬದುಕಿಲ್ಲ.
ಶರತ್ ಮದುವೆಯಾಗಿ ಐದು ವರ್ಷಗಳು ಮಕ್ಕಳಾಗಲಿಲ್ಲ. ಆ ಬಳಿಕ ಪತ್ನಿ ನಮಿತಾ ಗರ್ಭ ಧರಿಸಿದ್ದರು.ಹೆರಿಗೆ ದಿನಾಂಕವಾದ ಕಾರಣ ಡೆಲಿವರಿಗಾಗಿ ಭಾನುವಾರ ಸಂಜೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸೋಮವಾರ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಈ ವೇಳೆ ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
- Advertisement -