Wednesday, June 3, 2026
Homeಕರಾವಳಿಬೆಳ್ತಂಗಡಿ;ಕಳೆ ತೆಗೆಯುವ ಯಂತ್ರಕ್ಕೆ ಸಿಕ್ಕಿದ ಕಬ್ಬಿಣದ ಸರಿಗೆಯ ರಿಂಗ್ ಎದೆಗೆ ಬಡಿದು ಕಾರ್ಮಿಕ ಸಾವು

ಬೆಳ್ತಂಗಡಿ;ಕಳೆ ತೆಗೆಯುವ ಯಂತ್ರಕ್ಕೆ ಸಿಕ್ಕಿದ ಕಬ್ಬಿಣದ ಸರಿಗೆಯ ರಿಂಗ್ ಎದೆಗೆ ಬಡಿದು ಕಾರ್ಮಿಕ ಸಾವು

- Advertisement -
- Advertisement -

ಬೆಳ್ತಂಗಡಿ; ಕಳೆ ತೆಗೆಯುವ ಯಂತ್ರಕ್ಕೆ ಸಿಕ್ಕಿದ ಕಬ್ಬಿಣದ ಸರಿಗೆಯ ರಿಂಗ್ ಎದೆಗೆ ಬಡಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಹಾರಿತ್ತಕಜೆ ನಿವಾಸಿ ಕೊರಗಪ್ಪ ಗೌಡ (56)  ಮೃತ ದುರ್ದೈವಿ.

ಸೆ.17ರಂದು ಬೆಳಗ್ಗೆ ಬೈದಿಕಜೆ ಎಂಬಲ್ಲಿ ಕೊರಗಪ್ಪ ಗೌಡ ಅವರು ಕಳೆ ತೆಗೆಯುವ ಯಂತ್ರದ ಮೂಲಕ ರಬ್ಬರ್ ತೋಟದ ಕಾಡು ತೆಗೆಯುತ್ತಿದ್ದಾಗ ರಬ್ಬರ್ ಮರಕ್ಕೆ ಕಪ್‌ ಸಿಲುಕಿಸುವ ರಿಂಗ್ ಎದೆಗೆ ಬಡಿದು ಗಂಭೀರ ಗಾಯಗೊಂಡಿದ್ದರು.

ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ  ದಾರಿಮಧ್ಯೆ ಅವರು ಸಾವನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!