Thursday, June 4, 2026
Homeತಾಜಾ ಸುದ್ದಿಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡಿದ ಪತ್ನಿ;  ಮನನೊಂದು ಪತಿ ಆತ್ಮಹತ್ಯೆ

ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡಿದ ಪತ್ನಿ;  ಮನನೊಂದು ಪತಿ ಆತ್ಮಹತ್ಯೆ

- Advertisement -
- Advertisement -

ಚಾಮರಾಜನಗರ; ಸೋಷಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕ ಸಾಂಗ್ ಹವಾ ಯಾವ ರೇಂಜಿಗೆ ಇದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ನಿದ್ದೆಲೂ ಇದೇ ಸಾಂಗ್ ಕಿವಿಯಲ್ಲಿ ಗುಯಿಂಗುಟ್ಟೋ ರೇಂಜಿಗೆ ಸದ್ದು  ಮಾಡುತ್ತಿದೆ. ಹೀಗಿರುವಾಗ ಸಾಂಗ್ ನಿಂದಾಗಿ ವ್ಯಕ್ತಿಯೊಬ್ಬನ ಪ್ರಾಣಪಕ್ಷಿಯೇ ಹಾರಿ ಹೋಗಿದೆ.

 ಕರಿಮಣಿ ಮಾಲೀಕ ನೀನಲ್ಲ ಎಂದು ಪತ್ನಿ ರೀಲ್ಸ್ ಮಾಡಿದ್ದರಿಂದ ಮನನೊಂದ ಗಂಡನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಮಹಿಳೆಯೋರ್ವಳು ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ  ಹಾಡಿಗೆ ರೀಲ್ಸ್​ ಮಾಡಿದ್ದು ಇದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಮಾರ್ (33) ಮೃತ ವ್ಯಕ್ತಿ.

ಕುಮಾರ್‌ ಪತ್ನಿ ರೂಪಾ ಎಂಬಾಕೆ ತನ್ನ ಸೋದರಮಾವ ಹಾಗೂ ಸಹೋದರಿ ಜತೆಗೆ ಸೇರಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಂಗ್‌ಗೆ ರೀಲ್ಸ್‌ ಮಾಡಿ, ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಳು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಊರಲ್ಲಿ ಕುಮಾರ್‌ನನ್ನು ಕೆಲವರು ಕಾಲೆಳೆದು ಯಾರಪ್ಪಾ ಕರಿಮಣಿ ಮಾಲೀಕ ಎಂದು ಹೀಯಾಳಿಸಿದ್ದಾರೆ. ಪತ್ನಿಯ ಈ ರೀಲ್ಸ್ ನೋಡಿ ಕುಮಾರ್​ನನ್ನು ಗೆಳೆಯರು ರೇಗಿಸಿದ್ದಾರೆಯ ಈ ವಿಚಾರದ ಬಗ್ಗೆ ಕೋಪಗೊಂಡ ಕುಮಾರ್, ರೀಲ್ಸ್​ ಮಾಡಿರುವುದನ್ನು ಪ್ರಶ್ನಿಸಿ ರೂಪ ಜೊತೆ ಗಲಾಟೆ ಮಾಡಿದ್ದಾನೆ.​ಬಳಿಕ ಮನನೊಂದು ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

Latest News

error: Content is protected !!