Friday, June 5, 2026
Homeಕರಾವಳಿಬಂಟ್ವಾಳ: ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಗರ್ಭಿಣಿ ಸಾವು

ಬಂಟ್ವಾಳ: ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಗರ್ಭಿಣಿ ಸಾವು

- Advertisement -
- Advertisement -

ಬಂಟ್ವಾಳ: ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಗರ್ಭಿಣಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ನಡೆದಿದೆ. ತೆಂಕಕಜೆಕಾರು ನಿವಾಸಿ ವಸಂತ ಅವರ ಪತ್ನಿ ಸುಜಾತ ಮೃತ ಗರ್ಭಿಣಿ.

ಸುಜಾತ ಅವರ ಮಗುವಿಗೆ  ಹೃದಯ ಸಂಬಂಧಿ ತೊಂದರೆ ಇದೆ ಎನ್ನುವ ಕಾರಣಕ್ಕೆ ಫೆ.12 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿತ್ತು. 10 ವರ್ಷಗಳ ಬಳಿಕ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾಗಲೇ ಅವರ ಬದುಕಿನಲ್ಲಿ ವಿಧಿಯಾಟವಾಡಿದ್ದು ಮಾತ್ರ ದುರಂತ.

- Advertisement -

Latest News

error: Content is protected !!