- Advertisement -
![]()
- Advertisement -
ಸುಳ್ಯ: ದಿಢೀರ್ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಪಂಜದ ಕರಿಕ್ಕಳದಲ್ಲಿ ನಿನ್ನೆ ನಡೆದಿದೆ.
ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಪುರಿಯ ಮೋನಪ್ಪ ಗೌಡರ ಪುತ್ರ ಗಿರೀಶ್ ಕುಮಾರ್ ಮೃತ ಯುವಕ.
ಮಧ್ಯಾಹ್ನದ ಮನೆಯಲ್ಲಿ ಇದ್ದಾಗ ಗಿರೀಶ್ ಅವರಿಗೆ ಒಮ್ಮೆಲೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಪುತ್ತೂರಿಗೆ ಕರೆದುಕೊಂಡು ಹೋಗಲಾಗಿದೆ. ಆದರೆ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಅವರನ್ನು ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಾರಿನಲ್ಲಿ ಕೊಂಡೊಯ್ಯುದ್ದಿದ್ದು, ಆದರೆ ಅವರು ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
- Advertisement -


