Friday, June 5, 2026
Homeಕರಾವಳಿಮಂಗಳೂರುಸುಳ್ಯ; ಕಾಡು ಹಣ್ಣು ಸೇವಿಸಿ ವ್ಯಕ್ತಿ ಸಾವು

ಸುಳ್ಯ; ಕಾಡು ಹಣ್ಣು ಸೇವಿಸಿ ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ; ಕಾಡು ಹಣ್ಣು ಸೇವಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಅಮರಪಟ್ನೂರು ಗ್ರಾಮದ ಕುಳ್ಳಾಜೆಯಲ್ಲಿ ನಡೆದಿದೆ. ಕುಳ್ಳಾಜೆಯ ಲೋಕಯ್ಯ (60) ಮೃತ ವ್ಯಕ್ತಿ.

2023ರ ಅಕ್ಟೋಬರ್‌ನಲ್ಲಿ ಲೋಕಯ್ಯ ಹಾಗೂ ಅವರ ಮಗಳು ಲೀಲಾವತಿ ಅವರು ಐರೋಳ್‌ ಹಣ್ಣನ್ನು ತಿಂದಿದ್ದರು. ಪರಿಣಾಮ ಇಬ್ಬರೂ ಅಸ್ವಸ್ಥಗೊಂಡಿದ್ದರು. ಔಷಧ ಪಡೆದುಕೊಂಡಿದ್ದ ಲೋಕಯ್ಯ ಅವರು ಗುಣಮುಖರಾಗಿದ್ದರೆ, ಲೀಲಾವತಿ ಕೆಲವು ದಿನಗಳ ಬಳಿಕ ಮೃತರಾಗಿದ್ದರು. ಲೋಕಯ್ಯ ಗುಣಮುಖರಾಗಿದ್ದರೂ, ಕೆಲವು ದಿನಗಳಿಂದ ಅಸೌಖ್ಯಗೊಂಡಿದ್ದು, ಬುಧವಾರ ನಿಧರಾಗಿದ್ದಾರೆ ಎನ್ನಲಾಗಿದೆ. ಸದ್ಯ ಕಾಡು ಹಣ್ಣು ತಿಂದ ಬಳಿಕವೇ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಎನ್ನಲಾಗುತ್ತಿದ್ದ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Latest News

error: Content is protected !!