Saturday, June 6, 2026
Homeಕರಾವಳಿವಿಟ್ಲದಲ್ಲಿ ತಮ್ಮ ಟೈಲರ್ ಶಾಪ್ ನಲ್ಲೇ ವ್ಯಕ್ತಿ ನೇಣಿಗೆ ಶರಣು

ವಿಟ್ಲದಲ್ಲಿ ತಮ್ಮ ಟೈಲರ್ ಶಾಪ್ ನಲ್ಲೇ ವ್ಯಕ್ತಿ ನೇಣಿಗೆ ಶರಣು

- Advertisement -
- Advertisement -

ವಿಟ್ಲ: ತಮ್ಮ ಟೈಲರ್ ಶಾಪ್ ನಲ್ಲೇ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಇಲ್ಲಿನ ಸಾಗರ್ ಟೈಲರ್ಸ್ ಮಾಲೀಕ ಲಕ್ಷ್ಮಣ ಗೌಡ(50) ಆತ್ಮಹತ್ಯೆಗೆ ಶರಣಾದವರು.

ವಿಟ್ಲದ ನೀರಕಣಿ ನಿವಾಸಿಯಾಗಿದ್ದ ಲಕ್ಷ್ಮಣ ಗೌಡ 25 ವರ್ಷಗಳಿಂದ ಸಾಗರ್ ಟೈಲರ್ಸ್ ಎಂಬ ಟೈಲರಿಂಗ್ ಶಾಪ್ ಮುನ್ನಡೆಸುತ್ತಿದ್ದರು.ಎಲ್ಲರ ವಿಶ್ವಾಸ ಗಳಿಸಿದ್ದ ಲಕ್ಷ್ಮಣ ಗೌಡ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!