Thursday, June 4, 2026
Homeಕರಾವಳಿಸುಳ್ಯ: ಕಳಂಜದ ವ್ಯಕ್ತಿ ಬೇಂಗಮಲೆ ಕಾಡಿನಲ್ಲಿ ಆತ್ಮಹತ್ಯೆ

ಸುಳ್ಯ: ಕಳಂಜದ ವ್ಯಕ್ತಿ ಬೇಂಗಮಲೆ ಕಾಡಿನಲ್ಲಿ ಆತ್ಮಹತ್ಯೆ

- Advertisement -
- Advertisement -

ಸುಳ್ಯ: ಕಳಂಜ ಗ್ರಾಮದ ವ್ಯಕ್ತಿಯೊಬ್ಬರು ಬೇಂಗಮಲೆ ಕಾಡಿನಲ್ಲಿ ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಕಳಂಜ ನಿವಾಸಿ ನಾಗಪ್ಪ ಗೌಡ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ನಾಗಪ್ಪ ಅವರನ್ನು ಲೋ ಬಿಪಿ ಹಿನ್ನೆಲೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪತ್ನಿ ಕೂಡ ಅವರ ಜೊತೆ ಆಸ್ಪತ್ರೆಯಲ್ಲಿದ್ದರು. ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ನಾಗಪ್ಪ ಗೌಡ ನೈಲಾನ್ ಹಗ್ಗ ಖರೀದಿಸಿ, ನಡೆದುಕೊಂಡೇ ಬೇಂಗಮಲೆಗೆ ಬಂದು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,

ವಾಹನ ಚಾಲಕರು ಆತ್ಮಹತ್ಯೆ ಮಾಡಿಕೊಂಡದ್ದನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರಣೆ ಕೆಲಸ ಮಾಡುತ್ತಿದ್ದ ನಾಗಪ್ಪ ಗೌಡ ಪತ್ನಿ ಸುಂದರಿ, ಮಕ್ಕಳಾದ ಅನಿತಾ, ಪ್ರವೀಣ್, ಪ್ರಶಾಂತ್ ಹಾಗೂ ಅಕ್ಷತಾ ಅವರನ್ನು ಅಗಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!