Thursday, June 4, 2026
Homeತಾಜಾ ಸುದ್ದಿಮಗಳಿಂದ ತಂದೆಯ ಮೇಲೆ ಅತ್ಯಾಚಾರ ಆರೋಪ: ಮಡಿಕೇರಿಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾದ ಅಪ್ಪ..

ಮಗಳಿಂದ ತಂದೆಯ ಮೇಲೆ ಅತ್ಯಾಚಾರ ಆರೋಪ: ಮಡಿಕೇರಿಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾದ ಅಪ್ಪ..

- Advertisement -
- Advertisement -

ಮಡಿಕೇರಿ: ತನ್ನ ಸಾವಿಗೆ ತನ್ನ ಮಗಳು ಹಾಗೂ ಪತ್ನಿ ಕಾರಣ ಎಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡುನಲ್ಲಿ ನಡೆದಿದೆ.

ಪುದಿಯೊಕ್ಕಡ ಭರತ್(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಸಾವಿಗೆ ಪತ್ನಿ, ಮಗಳೇ ಕಾರಣವೆಂದು ಡೆತ್‌ನೋಟ್​ನಲ್ಲಿ ಭರತ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭರತ್  ಮೇಲೆ ಅವರ ಮಗಳು ಮೇಘಾ ಅವರೇ ಅತ್ಯಾಚಾರದ ಆರೋಪ ಹೊರಿಸಿದ್ದಳು. ಅವರು ಆರೋಪ ಮುಕ್ತರಾಗಿ ಬಂದಿದ್ದರೂ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದರಂತೆ. ಹೀಗಾಗಿ ಮನನೊಂದ ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ, ಮಗಳೇ ಕಾರಣವೆಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಭರತ್ ಪುತ್ರಿ ಮೇಘ ತಂದೆಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಳು. ಆದ್ರೆ ಈ ಕೇಸ್ ಕೋರ್ಟ್​ನಲ್ಲಿ ನಿಲ್ಲಲಿಲ್ಲ. ವಾದ-ಪ್ರತಿವಾದ, ತನಿಖೆಗಳಾಗಿ ಕೊನೆಗೆ ಭರತ್ ಆರೋಪ ಮುಕ್ತನಾಗಿ ಬಂದಿದ್ದರು.

ಇನ್ನು ದೇಶದಲ್ಲಿ ಅತ್ಯಾಚಾರ ಕುರಿತ ಕಾನೂನು ಬದಲಾಗಬೇಕು ಎಂದು ಡೆತ್‌ನೋಟ್‌ನಲ್ಲಿ ಭರತ್ ಮನವಿ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

- Advertisement -

Latest News

error: Content is protected !!