Monday, April 29, 2024
Homeಕರಾವಳಿಬೆಳ್ತಂಗಡಿ : ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿಯನ್ನು ಸುಳ್ಳು ಪ್ರಕರಣದಲ್ಲಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ; ಚೆಕ್ ಬೌನ್ಸ್ ಪ್ರಕರಣದಲ್ಲಿ ...

ಬೆಳ್ತಂಗಡಿ : ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿಯನ್ನು ಸುಳ್ಳು ಪ್ರಕರಣದಲ್ಲಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ; ಚೆಕ್ ಬೌನ್ಸ್ ಪ್ರಕರಣದಲ್ಲಿ  ತಲೆಮರೆಸಿಕೊಂಡಿದ್ದ ಆರೋಪಿ ಜೈಲು ಪಾಲು

spot_img
- Advertisement -
- Advertisement -

ಬೆಳ್ತಂಗಡಿ :  ಬೆಳ್ತಂಗಡಿ ಸರ್ಕಲ್‌‌‌ ಇನ್ಸ್ಪೆಕ್ಟರ್ ಅಗಿದ್ದ ಗಂಗ್ಗಿರೆಡ್ಡಿಯನ್ನು ಲಂಚ ಪಡೆದ ಸುಳ್ಳು ಆರೋಪದಲ್ಲಿ ಲೋಕಾಯಕ್ತ ಪೊಲೀಸರಿಗೆ ಟ್ರ್ಯಾಪ್ ಮಾಡಿಸಿದ ದೂರುದಾರ ಇದೀಗ ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ  ಬೆಳ್ತಂಗಡಿ ಪೊಲೀಸರು ಜೈಲಿಗಟ್ಟಿದ್ದಾರೆ.

ಚೆಕ್ ಬೌನ್ಸ್ ಪ್ರಕರಣ:ಬೆಳ್ತಂಗಡಿ ನ್ಯಾಯಲಯದ ಸಿ.ಸಿ ನಂಬ್ರ 118/2021 ಕಲಂ.138 NI Act (ಚೆಕ್ ಬೌನ್ಸ್) ಪ್ರಕರಣದಲ್ಲಿ  ವಾರಂಟು ಆರೋಪಿ ಶ್ರೀನಿವಾಸ್ ಪ್ರಸಾದ್(50) ಎಂಬಾತನನ್ನು ಜ.24 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರಳೀಧರ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿ ವ್ರಷಭ ಮತ್ತು ಬಸವರಾಜ್ ರವರು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುನಿಂದ ವಶಕ್ಕೆ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ಬೆಳ್ತಂಗಡಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಟ್ಯಾಪ್ ಪ್ರಕರಣ:*ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಗಂಗ್ಗಿರೆಡ್ಡಿ ಅವರನ್ನು ಸುಳ್ಳು ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಶ್ರೀನಿವಾಸ್ ಪ್ರಸಾದ್ .  ಮಂಗಳೂರು ನ್ಯಾಯಾಲಯ ಇನ್ಸ್ಪೆಕ್ಟರ್ ಅವರ ಆರೋಪ ಸಾಬೀತಾಗಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದರು. ನಂತರ 2022 ರಲ್ಲಿ ಹೈಕೋರ್ಟ್ ನಲ್ಲಿ ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿ ಅವರ ಆರೋಪ ಪ್ರಕರಣ ಸುಳ್ಳು ಎಂದು ರದ್ದಾಗಿತ್ತು. ಇದೀಗ ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!