- Advertisement -
- Advertisement -
ಉಡುಪಿ: ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಗೆ ಮದುವೆಯಾಗೋದಾಗಿ ಹೇಳಿ ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ. ಕಾರ್ಕಳ ಕುಕ್ಕುಂದೂರು ನಿವಾಸಿ ಸುಕೇಶ್ ಪುತ್ರನ್ ಬಂಧಿತ.
ಸುಕೇಶ್ ಪುತ್ರನ್ ವಿರುದ್ಧ ಸಂತ್ರಸ್ತೆಗೆ ಏಳು ವರ್ಷದಿಂದಲೇ ಪರಿಚಯವಿದ್ದ ಎನ್ನಲಾಗಿದೆ. ಆತ ಮದ್ವೆಯ ನೆಪ ಹೇಳಿ ವಿವಿಧ ಲಾಡ್ಜ್ ಗಳಿಗೆ ಕರೆದುಕೊಂಡು ಹೋಗಿ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ವಿದೇಶಕ್ಕೆ ಹೋಗಿದ್ದ. ಮರಳಿ ಬಂದು ಮತ್ತೆ ಅದೇ ಕೃತ್ಯವನ್ನು ಎಸಗಿದ್ದ. ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಕೇಳಿ ಕೊನೆಗೂ ಹಿಂದೇಟು ಹಾಕಿದ್ದಾನೆ. ಈ ಬಗ್ಗೆ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -