Thursday, June 4, 2026
Homeಕರಾವಳಿಉಡುಪಿಸಂಸದ ತೇಜಸ್ವಿ ಸೂರ್ಯ ದಂಪತಿಯಿಂದ ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಗೀತ ಸೇವೆ

ಸಂಸದ ತೇಜಸ್ವಿ ಸೂರ್ಯ ದಂಪತಿಯಿಂದ ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಗೀತ ಸೇವೆ

- Advertisement -
- Advertisement -

ಉಡುಪಿ: ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ ದಂಪತಿ ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಗೀತ ಸೇವೆ ನೀಡಿದರು.

ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಭಾಗಿಯಾದ ದಂಪತಿ ಕೃಷ್ಣ ದೇವರ ಗರ್ಭಗುಡಿಯಲ್ಲಿ ನಡೆಯುವ ಮಹಾಪೂಜೆ ಮತ್ತು ಶಯನ ಪೂಜೆಯನ್ನು ಕಣ್ತುಂಬಿಕೊಂಡ್ರು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ದೇವರ ಮುಂದೆ ಸಂಗೀತ ಸೇವೆಯನ್ನು ನೀಡಿದರು.

ಆಡಿಸಿದಳು ಯಶೋಧೆ ಜಗದೋದ್ಧಾರನಾ ಹಾಗೂ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡನ್ನು ಹಾಡಿದರು. ಪರ್ಯಾಯ ಪುತ್ತಿಗೆ ಮಠ ಮತ್ತು ಉಡುಪಿ ಶ್ರೀ ಕೃಷ್ಣ ಮಠದ ಸಂಗೀತಗಾರರಾದ ನಾರಾಯಣ ಸರಳಾಯರು ಸಂಗೀತದಲ್ಲಿ ಸಾಥ್ ನೀಡಿದರು. ಇದೇ ವೇಳೆ ತೇಜಸ್ವಿ ಸೂರ್ಯ ವೇದ ಪಠಿಸಿದರು.

- Advertisement -

Latest News

error: Content is protected !!