Tuesday, May 21, 2024
Homeತಾಜಾ ಸುದ್ದಿಮಹಿಳಾ ವಕೀಲರಿಗೆ, ಪೊಲೀಸರಿಗೆ ಲೈಂಗಿಕ ಕಿರುಕುಳ, ವ್ಯಕ್ತಿಯ ಬಂಧನ

ಮಹಿಳಾ ವಕೀಲರಿಗೆ, ಪೊಲೀಸರಿಗೆ ಲೈಂಗಿಕ ಕಿರುಕುಳ, ವ್ಯಕ್ತಿಯ ಬಂಧನ

spot_img
- Advertisement -
- Advertisement -

ಬೆಂಗಳೂರು: ಅಶ್ಲೀಲ ಸಂದೇಶಗಳು ಮತ್ತು ವೀಡಿಯೊಗಳನ್ನು ಕಳುಹಿಸುವ ಮೂಲಕ ವಕೀಲರು ಮತ್ತು ಪೊಲೀಸರು ಸೇರಿದಂತೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 37 ವರ್ಷದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ 100ಕ್ಕೂ ಹೆಚ್ಚು ಮಹಿಳೆಯರು ಕಿರುಕುಳಕ್ಕೊಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ತುಮಕೂರಿನ ಮಧುಗಿರಿ ಮೂಲದ ದಿವ್ಯರಾಜ್ ಬಂಧಿತ ಆರೋಪಿ. ಕೃಷ್ಣ, ರಾಮಕೃಷ್ಣ, ಮಂಜುನಾಥ್, ಚೂಲ್, ಪ್ರಶಾಂತ್, ಪ್ರವೀಣ್ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದರು.

ಆರೋಪಿ ದಿವ್ಯರಾಜ್ ವಿರುದ್ಧ ವಿವಿಧ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿವೆ. ತನ್ನನ್ನು ಬಂಧಿಸುವಂತೆ ಪೊಲೀಸರಿಗೆ 6ತಿಂಗಳಿನಿಂದ ಸವಾಲು ಹಾಕುತ್ತಿದ್ದ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಮೂಲಕ ಥ್ರಿಲ್ ಪಡೆಯುತ್ತಿದ್ದೆ ಎಂದು ಆರೋಪಿ ದಿವ್ಯರಾಜ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ತನ್ನ ಕೆಲವು ಸಂತ್ರಸ್ತರೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ದಿವ್ಯರಾಜ್ ತನ್ನ ಸ್ನೇಹಿತರಿಗೆ ಕಾನೂನು ನೆರವು ನೀಡುವ ನೆಪದಲ್ಲಿ ವಕೀಲರ ಸಂಪರ್ಕ ವಿವರಗಳನ್ನು ಪಡೆಯುತ್ತಿದ್ದ.

ಅಂತೆಯೇ, ದೂರು ದಾಖಲಿಸಲು ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಪರ್ಕ ವಿವರಗಳನ್ನು ಪಡೆಯುತ್ತಿದ್ದರು.

- Advertisement -
spot_img

Latest News

error: Content is protected !!