Friday, June 5, 2026
Homeಕರಾವಳಿಪೆರೋಲ್ ಮೇಲೆ ಜೈಲಿನಿಂದ ಹೊರ ಬಂದು ತಲೆಮರೆಸಿಕೊಂಡಿದ್ದ ಆರೋಪಿ; 15 ವರ್ಷಗಳ ಬಳಿಕ ಬೆಳ್ತಂಗಡಿಯಲ್ಲಿ ಖರ್ತನಾಕ್...

ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದು ತಲೆಮರೆಸಿಕೊಂಡಿದ್ದ ಆರೋಪಿ; 15 ವರ್ಷಗಳ ಬಳಿಕ ಬೆಳ್ತಂಗಡಿಯಲ್ಲಿ ಖರ್ತನಾಕ್ ಕಿಲಾಡಿಯ ಬಂಧನ

- Advertisement -
- Advertisement -

ಬೆಳ್ತಂಗಡಿ:ಪೆರೋಲ್ ಮೇಲೆ ಬಂದು ತಲೆಮರೆಸಿಕೊಂಡಿದ್ದ ಖರ್ತನಾಕ್ ಕಿಲಾಡಿಯನ್ನು ಬೆಂಗಳೂರಿನ ಮಡಿವಾಳ ಪೊಲೀಸರು ಬೆಳ್ತಂಗಡಿಯಲ್ಲಿ ಬಂಧಿಸಿದ್ದಾರೆ.

ಬರೋಬ್ಬರಿ 15 ವರ್ಷಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.2007 ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ 30 ದಿನಗಳ ಪೆರೋಲ್ ಮೇಲೆ ಸುಹೇಲ್ ಹೊರ ಬಂದಿದ್ದ. ಹಾಗೇ ಬಂದವನು  ಬೆಳ್ತಂಗಡಿಯಲ್ಲಿ ತಲೆಮರೆಸಿಕೊಂಡಿದ್ದ .ಸುಹೇಲ್ ಹೆಸರನ್ನ ಮಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡು, ಬೆಳ್ತಂಗಡಿ ಸಾಗರ್ ಎಂಟರ್ ಪ್ರೈಸ್ ‌ಲ್ಲಿ ಕೆಲಸ ಮಾಡುತ್ತಿದ್ದ.

ಈತ ಆಯುರ್ವೇದಿಕ್ ಮೆಡಿಸಿನ್ ಬಿಜಿನೆಸ್ ಮಾಡಿಕೊಂಡಿದ್ದ. ಇದರ ಜೊತೆಗೆ ಕೊಲೆ, ಕಳವು, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಈತನನ್ನು ಬಂಧಿಸಿ ಮಡಿವಾಳ ಪೊಲೀಸರು ಜೈಲಿಗಟ್ಟಿದರು. ಅಲ್ಲದೇ ಈತನ ಪತ್ತೆಗೆ ಪೊಲೀಸರು ಬರೋಬ್ಬರಿ 10 ಲಕ್ಷ ಹಣ ರೂಪಾಯಿ ಖರ್ಚು ಮಾಡಿದ್ದರು. ಇದೀಗ ಕೊನೆಗೂ ಖರ್ತನಾಕ್ ಕಿಲಾಡಿಯನ್ನು ಪೊಲೀಸರು ಬೆಳ್ತಂಗಡಿಯಲ್ಲಿ ಬಂಧಿಸಿದ್ದಾರೆ.

- Advertisement -

Latest News

error: Content is protected !!