Monday, June 8, 2026
Homeಕರಾವಳಿಪುತ್ತೂರು; ಚಲಿಸುತ್ತಿದ್ದ ಕಾರು ನಿಲ್ಲಿಸಿ ವ್ಯಕ್ತಿ ಹಲ್ಲೆ ಆರೋಪ

ಪುತ್ತೂರು; ಚಲಿಸುತ್ತಿದ್ದ ಕಾರು ನಿಲ್ಲಿಸಿ ವ್ಯಕ್ತಿ ಹಲ್ಲೆ ಆರೋಪ

- Advertisement -
- Advertisement -

ಪುತ್ತೂರು; ಚಲಿಸುತ್ತಿದ್ದ ಕಾರು ನಿಲ್ಲಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪ ಪುತ್ತೂರಿನ ಕೆದಿಲ ಗ್ರಾಮದ ಗಾಂಧಿನಗರದಿಂದ ಕೇಳಿ ಬಂದಿದೆ. ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್‌ ರಾಶಿಕ್‌ ಹಲ್ಲೆಗೊಳಗಾದ ವ್ಯಕ್ತಿ.

ರಾಶಿಕ್  ತನ್ನ ಕಾರಿನಲ್ಲಿ ಮಾರಿಪಳ್ಳಕ್ಕೆ ಹೋಗಿ ಮರಳುತ್ತಿದ್ದಾಗ ಕೆದಿಲ ಗ್ರಾಮದ ಗಾಂಧಿನಗರದಲ್ಲಿ ಶಾಫಿ ಗಡಿಯಾರ ಮತ್ತು ಜೆಸಿಬಿ ಸಿದ್ದಿಕ್‌ ಕಾರನ್ನು ತಡೆದ ನಿಲ್ಲಿಸಿ ಅವಾಚ್ಯವಾಗಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ರಾಶಿಕ್ ಆರೋಪಿಸಿದ್ದಾರೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Latest News

error: Content is protected !!