Thursday, June 4, 2026
Homeಕರಾವಳಿಉಡುಪಿಭಾರಿ ಗಾಳಿ,ಮಳೆ ಹಿನ್ನೆಲೆ- 'ಮೂರು ಬೋಟ್ ಮುಳುಗಡೆ' ಅದೃಷ್ಟವಶಾತ್ ಪಾರಾದ ಮೀನುಗಾರರು!..

ಭಾರಿ ಗಾಳಿ,ಮಳೆ ಹಿನ್ನೆಲೆ- ‘ಮೂರು ಬೋಟ್ ಮುಳುಗಡೆ’ ಅದೃಷ್ಟವಶಾತ್ ಪಾರಾದ ಮೀನುಗಾರರು!..

- Advertisement -
- Advertisement -

ಮಲ್ಪೆ: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಗಾಳಿ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಮಲ್ಪೆಯಲ್ಲಿ ಮೂರು ಬೋಟ್ ಗಳು ಮುಳುಗಡೆಯಾಗಿದೆ. ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂ ನಷ್ಟವಾಗಿದೆ. ಮೀನುಗಾರರು ಕಲ್ಲು ಬಂಡೆ ಮೇಲೆ ಆಶ್ರಯ ಪಡೆದು ದಡ ಸೇರಿ ಸುರಕ್ಷಿತವಾಗಿದ್ದಾರೆ. ಎಂದು ವರದಿಯಾಗಿದೆ

ರಾತ್ರಿಯೇ ಕರಾವಳಿ ರಕ್ಷಣೆ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತಾದರೂ ಸಾಧ್ಯವಾಗದ ಹಿನ್ನಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳೂರಿನಿಂದ ಎನ್ ಡಿಆರ್ ಎಫ್ ಪಡೆಯನ್ನು ಕಳುಹಿಸಲು ಮಂಗಳೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ ಸೇರಿದಂತೆ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿದೆ. ನೆರೆಪೀಡಿತ ಕುಕ್ಕೆಹಳ್ಳಿ ಹಾಗೂ ಇನ್ನಿತರ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೂಚನೆ ನೀಡಿದ್ದಾರೆ.

- Advertisement -

Latest News

error: Content is protected !!