Thursday, June 25, 2026
Homeಕರಾವಳಿವಿಟ್ಲ: ಗುಡ್ಡ ಕುಸಿದು ಮನೆ ಸಂಪೂರ್ಣ ಹಾನಿ, ಇಬ್ಬರ ಸ್ಥಿತಿ ಗಂಭೀರ!..

ವಿಟ್ಲ: ಗುಡ್ಡ ಕುಸಿದು ಮನೆ ಸಂಪೂರ್ಣ ಹಾನಿ, ಇಬ್ಬರ ಸ್ಥಿತಿ ಗಂಭೀರ!..

- Advertisement -
- Advertisement -

ವಿಟ್ಲ: ಇಲ್ಲಿನ ಮಂಗಲಪದವು ಪ್ರದೇಶದ ಕೋಡಪದವಿನ ಬಾಬಟ್ಟ ಎಂಬಲ್ಲಿ ಗುಡ್ಡಕುಸಿದು ಮನೆಯೊಂದು ಸಂಪೂರ್ಣ ಹಾನಿಗೊಳಗಾಗಿದೆ. ಕೆಲವು ದಿನಗಳಿಂದ ಕರಾವಳಿಯಲ್ಲಿ ಸುರಿಯುತ್ತಿರುವ ಬಾರಿಮಳೆಗೆ ಮನೆಯ ಸಮೀಪದ ಗುಡ್ಡ ಕುಸಿದು ಮನೆ ಹಾನಿಗೊಳಗಾಗಿದೆ.

ಮೊದಲಿಗೆ ಮನೆಯ ಅಡುಗೆ ಕೋಣೆಗೆ ಕುಸಿದ ಗುಡ್ಡ ನಂತರ ಸಂಪೂರ್ಣ ಮನೆಯನ್ನು ವ್ಯಾಪಿಸಿತ್ತು. ಸದ್ದು ಕೇಳಿ ಮನೆಯವರು ಹೊರಗೆ ಓಡಿ ಹೋದದ್ದರಿಂದ ಪ್ರಾಣ ಹಾನಿ ತಪ್ಪಿದೆ. 6ಜನರಿದ್ದ ಮನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. 4ಜನರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!