Saturday, June 6, 2026
Homeಕರಾವಳಿಉಡುಪಿವಿಚಾರಣೆ ವೇಳೆ ಖ್ಯಾತ ಆ್ಯಂಕರ್ ಕಂ ನಟಿ ಹೆಸರು ಉಲ್ಲೇಖಿಸಿದ ಡ್ರಗ್ ಆರೋಪಿ ಕಿಶೋರ್ ಶೆಟ್ಟಿ

ವಿಚಾರಣೆ ವೇಳೆ ಖ್ಯಾತ ಆ್ಯಂಕರ್ ಕಂ ನಟಿ ಹೆಸರು ಉಲ್ಲೇಖಿಸಿದ ಡ್ರಗ್ ಆರೋಪಿ ಕಿಶೋರ್ ಶೆಟ್ಟಿ

- Advertisement -
- Advertisement -

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅರೆಸ್ಟ್ ಆಗಿರುವ ಕಿಶೋರ್  ಶೆಟ್ಟಿ ಮೂಲಕ ಸಿಸಿಬಿ ಅಧಿಕಾರಿಗಳಿಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ಅಕುಲ್ ಬಾಲಾಜಿ ಪರಿಚಯ ಹೇಗಾಯ್ತು ಅನ್ನೋದನ್ನು ಆತ ಬಾಯ್ಬಿಟ್ಟಿದ್ದಾನೆ.

ಇದೆಲ್ಲದರ ನಡುವೆ ಕಿಶೋರ್ ಡ್ರಗ್ ಪಾರ್ಟಿಗೆ ಬಂದಿದ್ದ ಖ್ಯಾತ ನಿರೂಪಕಿ ಕಂ ನಟಿಯ ಹೆಸರು ಹೇಳಿದ್ದಾನೆ. ಆದರೆ , ಆಕೆ ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಡ್ರಿಂಕ್ಸ್​ ಮಾಡುತ್ತಿದ್ದಳು ಅಂತಾ ಮಾಹಿತಿ ನೀಡಿದ್ದಾನಂತೆ. ಆ ನಿರೂಪಕಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸೆಟಲ್ ಆಗಿದ್ದಾರೆ. ಕಳೆದ ಐದಾರು ವರ್ಷಗಳಿಂದ ಸಿನಿಮಾಗಳಲ್ಲಿ ಸಹ ನಟನೆ‌ ಮಾಡುತ್ತಿದ್ದಾರೆ ಎಂದು ಆತ ಹೇಳಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಆದರೆ ನಿರೂಪಕಿ ಕಂ ನಟಿ ಯಾರು ಅನ್ನೋದು ಸಿಸಿಬಿ ಅಧಿಕಾರಿಗಳನ್ನು ಅವರನ್ನು ವಿಚಾರಣೆಗೆ ಕರೆದಾಗಷ್ಟೇ ಗೊತ್ತಾಗಬೇಕಿದೆ.

- Advertisement -

Latest News

error: Content is protected !!