Saturday, May 18, 2024
Homeತಾಜಾ ಸುದ್ದಿಸ್ಟಾರ್ ನಟರ ಪತ್ನಿಯರಿಗೆ ಮುಳುವಾಗುತ್ತಾ ಡ್ರಗ್ಸ್ ಪ್ರಕರಣ ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಡ್ರಗ್ಸ್...

ಸ್ಟಾರ್ ನಟರ ಪತ್ನಿಯರಿಗೆ ಮುಳುವಾಗುತ್ತಾ ಡ್ರಗ್ಸ್ ಪ್ರಕರಣ ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಡ್ರಗ್ಸ್ ಪಾರ್ಟಿ?

spot_img
- Advertisement -
- Advertisement -

ಬೆಂಗಳೂರು : ಡ್ರಗ್ಸ್ ದಂಧೆಯ ಮೂಲ ಕೆದಕುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ಕೆದಕಿದಷ್ಟು ಮಾಹಿತಿಗಳು ಸಿಗುತ್ತಲೇ ಇದೆ. ನಿನ್ನೆ ಸಿಸಿಬಿ ಅಧಿಕಾರಿಗಳು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕುಲ್ ಬಾಲಾಜಿ ಅವರನ್ನು ವಿಚಾರಣೆ ನಡೆಸಿದ್ದಾರೆ.

ಇದೆಲ್ಲದರ ಮಧ್ಯೆ ಸಿಸಿಬಿ ಅಧಿಕಾರಿಗಳಿಗೆ ಅಕುಲ್ ಬಾಲಾಜಿ ಒಡೆತನದ Sunshine BY JADE ರೆಸಾರ್ಟ್ ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಇರುವ ದೊಡ್ಡಬಳ್ಳಾಪುರ ಬಳಿಯಿರುವ ಈ ರೆಸಾರ್ಟ್​ನಲ್ಲಿ ಹೊರಗಿನ ಜನರಿಗೆಂದು ರೆಸಾರ್ಟ್ ವತಿಯಿಂದಲೇ ಇವೆಂಟ್ ಮಾಡುತ್ತಿದ್ರು.

ಸ್ಟಾರ್ ನಟ ಮತ್ತು ನಿರ್ಮಾಪಕರ ಪತ್ನಿಯರಿಗಾಗಿಯೇ ಪಾರ್ಟಿ ಆಯೋಜಿಸಲಾಗುತ್ತಿತ್ತು. ಕನ್ನಡದ ಸ್ಟಾರ್ ನಟರ ಪತ್ನಿಯರನ್ನ ಕರೆಸಿ ಮಾಡುತಿದ್ದ ಲೇಡಿಸ್ ಪಾರ್ಟಿ ನಡೆಸುತ್ತಿದ್ದ ಅಕುಲ್​ ಮಧ್ಯಾಹ್ನ ಶುರುವಾಗುತ್ತಿದ್ದ ಈ ಪಾರ್ಟಿಗಳು ತಡರಾತ್ರಿವರೆಗೂ ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.

ಪಾರ್ಟಿಯಲ್ಲಿ ಇಸ್ಪೀಟ್, ಮಾಂಸದೂಟ ನಂತರ ಭರ್ಜರಿ ಎಣ್ಣೆ ಪಾರ್ಟಿ. ಎಲ್ಲಾ ಪಾರ್ಟಿ ಮುಗಿದ ನಂತರ ಡ್ರಗ್ಸ್ ಸಹ ನೀಡಲಾಗುತಿತ್ತು ಎಂದು ಹೇಳಲಾಗಿದೆ. ಜ್ಯೂಸ್​ಗೆ MDMA ಮಾತ್ರೆಗಳನ್ನು ಬೆರಸಿ ನೀಡಲಾಗುತಿತ್ತಂತೆ. ಈ MDMA ಮಾತ್ರೆಗಳಿಗೆ ಸ್ಮೈಲಿ ಎಂದು ಕರೆಯುತ್ತಿದ್ದರಂತೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಜೊತೆಗೆ, ಒಂದು MDMA ಮಾತ್ರೆಯನ್ನು ಮೂವರಿಗೆ ಹಂಚಲಾಗುತಿತ್ತು ಎಂದು ತಿಳಿದುಬಂದಿದೆ. ಬಳಿಕ ವಾಪಸ್​ ಬೆಂಗಳೂರಿಗೆ ಬರುವವರಿಗೆ ವ್ಯವಸ್ಥೆ ಮಾಡಲಾಗುತಿತ್ತು. ಇದಲ್ಲದೆ, ಅಲ್ಲೆ ಉಳಿಯುವವರಿಗೆ ಮಲಗಲು ರೂಮ್ ವ್ಯವಸ್ಥೆ ಸಹ ಮಾಡಲಾಗುತ್ತಿತ್ತು. ಈ ರೀತಿ ನಿರೂಪಕ ಅಕುಲ್ ಬಾಲಾಜಿಯ ಸನ್​ಶೈನ್ ರೆಸಾರ್ಟ್​ನಲ್ಲಿ ಡ್ರಗ್ಸ್ ದಂಧೆ ನಡೆದಿರಬಹುದು ಎಂಬ ಮಾಹಿತಿ CCBಗೆ ಲಭ್ಯವಾಗಿದೆ.

- Advertisement -
spot_img

Latest News

error: Content is protected !!