Thursday, June 4, 2026
Homeಮನರಂಜನೆಬಿಗ್ ಬಾಸ್ ಮನೆಗೆ ವಿದಾಯ ಹೇಳಿದ ಮಲ್ಲಮ್ಮ; ಅರ್ಧಕ್ಕೆ ಆಟ ನಿಲ್ಲಿಸಿದ್ದ್ಯಾಕೆ ಮಲ್ಲಮ್ಮ?

ಬಿಗ್ ಬಾಸ್ ಮನೆಗೆ ವಿದಾಯ ಹೇಳಿದ ಮಲ್ಲಮ್ಮ; ಅರ್ಧಕ್ಕೆ ಆಟ ನಿಲ್ಲಿಸಿದ್ದ್ಯಾಕೆ ಮಲ್ಲಮ್ಮ?

- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಸ್ಪರ್ಧಿ ಯಾದಗಿರಿ ಜಿಲ್ಲೆಯ ಸುರಪುರದ ಅಪ್ಪಟ ಹಳ್ಳಿ ಪ್ರತಿಭೆ ಮಲ್ಲಮ್ಮ ಅವರು ತಮ್ಮ ಬಿಗ್ ಬಾಸ್ ಜರ್ನಿಗೆ ವಿದಾಯ ಹೇಳಿದ್ದಾರೆ.

ಹೌದು.. ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಮಲ್ಲಮ್ಮ ಅವರ ಮಗನ ಪತ್ನಿ ಅಂದರೆ ಸೊಸೆ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ಅವರ ಜೊತೆ ಮಲ್ಲಮ್ಮ ಅವರು ಇರಬೇಕಾದ ಅನಿವಾರ್ಯತೆ ಇರೋದರಿಂದ ದೊಡ್ಮನೆಯಿಂದ ಅವರು ಹೊರಗಡೆ ಬಂದಿದ್ದಾರೆ.

https://youtu.be/7N-Lxr_BVMc?si=UVB9O1ljg2vSXqgp

ಸದ್ಯ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರೋದು ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದೆ. ಬಿಗ್ ಬಾಸ್ ಮನೆಗೆ ಮಲ್ಲಮ್ಮ ಮತ್ತೆ ವಾಪಾಸ್ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅವರ ಅಭಿಮಾನಿಗಳು. ಆ ನಿರೀಕ್ಷೆ ನಿಜವಾಗುತ್ತಾ ಕಾದು ನೋಡ್ಬೇಕು.

- Advertisement -

Latest News

error: Content is protected !!