Sunday, April 28, 2024
Homeತಾಜಾ ಸುದ್ದಿಯುವಕನಿಗೆ ವಿಡಿಯೋ ಕಾಲ್​ ಮಾಡಿ ಬ್ಲ್ಯಾಕ್​ಮೇಲ್: ಹಣಕ್ಕಾಗಿ ಯುವತಿಯ ಡಿಮ್ಯಾಂಡ್

ಯುವಕನಿಗೆ ವಿಡಿಯೋ ಕಾಲ್​ ಮಾಡಿ ಬ್ಲ್ಯಾಕ್​ಮೇಲ್: ಹಣಕ್ಕಾಗಿ ಯುವತಿಯ ಡಿಮ್ಯಾಂಡ್

spot_img
- Advertisement -
- Advertisement -

ಮೈಸೂರು: ಯುವತಿಯೊಬ್ಬಳು ಯುವಕನಿಗೆ ವಿಡಿಯೋ ಕಾಲ್​ ಮಾಡಿ ಬ್ಲ್ಯಾಕ್​ಮೇಲ್ ಮಾಡಿದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ವಾಸು ಬ್ಲ್ಯಾಕ್​ಮೇಲ್‌ಗೊಳಗಾದ ಯುವಕ. ವಾಸುಗೆ ಹಣ ನೀಡುವಂತೆ ಯುವತಿ ಬ್ಲ್ಯಾಕ್​ಮೇಲ್ ಮಾಡಿದ್ದು, ವಿಡಿಯೋ ಕಾಲ್​ಗೂ ಮೊದಲು ಮೆಸೇಜ್​ ಮಾಡಿ ತನ್ನನ್ನು ಅಮೃತಾ ಎಂದು ಯುವತಿ ಪರಿಚಯ ಮಾಡಿಕೊಂಡಿದ್ದಾಳೆ.

ಬಳಿಕ ಬೆಳಗ್ಗೆ 9 ಗಂಟೆ ಸುಮಾರಿಗೆ ವಿಡಿಯೋ ಕಾಲ್​​ ಮಾಡಿ ಯುವತಿ ನಗ್ನಳಾಗಿದ್ದಾಳೆ. ಕೂಡಲೇ ವಾಸು ವಿಡಿಯೋ ಕಾಲ್​ ಕಟ್ ಮಾಡಿದ್ದಾನೆ. ನಂತರ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿದ ಯುವತಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಯುವಕ ವಾಸು ದೂರು ದಾಖಲು ಮಾಡಿದ್ದಾರೆ.

- Advertisement -
spot_img

Latest News

error: Content is protected !!