Friday, May 3, 2024
Homeತಾಜಾ ಸುದ್ದಿಮಂಗಳೂರು: ಕಾಲೇಜಿನಿಂದ ಟಿಸಿ ಹಿಂಪಡೆದ 145 ಮುಸ್ಲಿಂ ವಿದ್ಯಾರ್ಥಿನಿಯರು: ಇದಕ್ಕೆಲ್ಲಾ ಕಾರಣ ಸಚಿವ ಬಿ.ಸಿ.ನಾಗೇಶ್​ ಎಂದ...

ಮಂಗಳೂರು: ಕಾಲೇಜಿನಿಂದ ಟಿಸಿ ಹಿಂಪಡೆದ 145 ಮುಸ್ಲಿಂ ವಿದ್ಯಾರ್ಥಿನಿಯರು: ಇದಕ್ಕೆಲ್ಲಾ ಕಾರಣ ಸಚಿವ ಬಿ.ಸಿ.ನಾಗೇಶ್​ ಎಂದ ಹಿಜಾಬ್‌ ಹೋರಾಟಗಾರ್ತಿ

spot_img
- Advertisement -
- Advertisement -

ಮಂಗಳೂರು: ಕಾಲೇಜುಗಳಲ್ಲಿ ಹಿಜಾಬ್ ವಿಚಾರವಾಗಿ ವಿವಾದ ಅಂತ್ಯಗೊಂಡಿಲ್ಲ. ಹಿಜಾಲ್‌ ಧರಿಸಲು ಕಾಲೇಜು ಅವಕಾಶ ನೀಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 145 ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ಟಿಸಿ ಪಡೆದಿದ್ದಾರೆ. ಟಿಸಿ ಪಡೆಯಬಹುದು ಅಂತಾ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ದ.ಕನ್ನಡ, ಉಡುಪಿ ಜಿಲ್ಲೆಯ 900 ವಿದ್ಯಾರ್ಥಿನಿಯರ ಪೈಕಿ 145 ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆ. ಸರ್ಕಾರಿ ಕಾಲೇಜಿನಿಂದ 34%, ಅನುದಾನಿತ ಕಾಲೇಜಿನಿಂದ 13% ವಿದ್ಯಾರ್ಥಿನಿಯರಿಂದ ಟಿಸಿ ಹಿಂಪಡೆಯಲಾಗಿದೆ. ಈ ಕುರಿತಾಗಿ ಆರ್​ಟಿಐ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಿದೆ.

ಇದಕ್ಕೆಲ್ಲಾ ಶಿಕ್ಷಣ ಸಚಿವರೇ ಕಾರಣ ಅಂತ ಹಿಜಾಬ್‌ ಹೋರಾಟಗಾರ್ತಿ ಗೌಸಿಯಾ ಹೇಳಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಗೌಸಿಯಾ ಟಿಸಿ ಪಡೆದಿದ್ದಾಳೆ. ಈ ಎಲ್ಲಾ ಘಟನೆಗಳಿಗೆ ಸಚಿವ ಬಿ.ಸಿ ನಾಗೇಶ್ ಕಾರಣ. ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಬಿಡಲಿಲ್ಲ.

ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ನಾಗೇಶ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೇ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ 30% ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ರಾಜ್ಯಕ್ಕೆ ಇದು ಜಲ್ವಂತ ಸಮಸ್ಯೆಯಾಗಲಿದೆ ಎಂದು ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿ ಗೌಸಿಯಾ ಹೇಳಿಕೆ ನೀಡಿದ್ದಾಳೆ.

- Advertisement -
spot_img

Latest News

error: Content is protected !!